FOOD | ಸಿಂಪಲ್‌ ಆದ ಆಲೂಗಡ್ಡೆ-ಕುಂಬಳಕಾಯಿ ಸೂಪ್‌, ರುಚಿ ಜೊತೆ ಕಂಫರ್ಟ್‌ ರೆಸಿಪಿ

ಕುಂಬಳಕಾಯಿ – ಮೂರು ಬಟ್ಟಲು (ಕತ್ತರಿಸಿದ್ದು)

ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)

ಆಲೂಗಡ್ಡೆ- ಎರಡು

ಬೆಣ್ಣೆ- ಒಂದು ಚಮಚ

ಕಾಳುಮೆಣಸಿನ ಪುಡಿ – 1 ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ.ಅದಕ್ಕೆ ಕತ್ತರಿಸಿ ಆಲೂಗಡ್ಡೆ ಹಾಗೂ ಕುಂಬಳಕಾಯಿ ಹೋಳುಗಳನ್ನು ಹಾಕಿ.ಒಂದು ಲೋಟ ನೀರು ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ.ಹೋಳುಗಳು ಬೆಂದ ನಂತರ ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.ರುಬ್ಬಿದ ಮಿಶ್ರಣವನ್ನು ಮತ್ತೆ ಬಿಸಿ ಮಾಡಿ. ಬಿಸಿ ಮಾಡುವಾಗ ಕಾಳುಮೆಣಸಿನ ಪುಡಿ ಹಾಕಿ. ನಂತರ ಗಾರ್ಲಿಕ್ ಬ್ರೆಡ್ ಜೊತೆ ಸರ್ವ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here