ಕಳ್ಳನನ್ನು ಕಳ್ಳರೇ ಹಿಡಿಯಬೇಕಾದ ಸ್ಥಿತಿ ನಮ್ಮಲ್ಲಿ ಉದ್ಭವಿಸಿದೆ: ವಾಟಾಳ್ ನಾಗರಾಜ್ ವ್ಯಂಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತ ರಾಜಕೀಯ ಸ್ಥಿತಿಗತಿಯನ್ನು ಲೇವಡಿ ಮಾಡಿ ವಿಶ್ಲೇಷಿಸಿದರು.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕುಟುಂಬವೇ ರಾಜಕೀಯದ ಭದ್ರಕೋಟೆಯಾಗಿದ್ದು, ಮಗನಿಗೆ ಟಿಕೆಟ್ ಕೇಳುವ ಮಂತ್ರಿ, ಪತ್ನಿಗೆ ಟಿಕೆಟ್ ಕೇಳುತ್ತಾನೆ. ಇಡೀ ರಾಜಕೀಯ ವ್ಯವಸ್ಥೆಯೇ ಹದಗೆಟ್ಟಿದ್ದು, ದೇಶ, ಜನರ ಬಗ್ಗೆ ಯೋಚಿಸುವ ರಾಜಕೀಯ ನಾಯಕರ ಸಂಖ್ಯೆ ಕಡಿಮೆಯಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಮಾನಹಾನಿ ಎಸಗಿರುವ ವಿಚಾರವನ್ನು ತಮ್ಮ ಗಮನಕ್ಕೆ ತಂದಾಗ ಕಳ್ಳರ ಕೇಸ್ ಬಂದಿದ್ದರಿಂದ ಎಲ್ಲರೂ ಕಳ್ಳರೇ, ಕಳ್ಳರನ್ನು ಹಿಡಿಯಬೇಕಾದ ಪರಿಸ್ಥಿತಿ ನಮ್ಮಲ್ಲಿದೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!