September 21, 2026
Monday, September 21, 2026
spot_img

ಆರೇಳು ವರುಷದ ಕಾಯುವಿಕೆಗೆ ಸಿಕ್ತು ಎಂಡ್ ಕಾರ್ಡ್: ಥಿಯೇಟರ್‌ಗೆ ಬರಲಿದೆ R&AW ಫೌಂಡರ್ ಜೀವನಗಾಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಕರಣ್ ಜೋಹರ್ ಮತ್ತೆ ಬಿಗ್ ನ್ಯೂಸ್ ಒಂದನ್ನು ತಂದಿದ್ದಾರೆ. ನಮ್ಮ ದೇಶದ ಹೆಮ್ಮೆಯ ವಿದೇಶಿ ಗೂಢಚಾರಿ ಸಂಸ್ಥೆ ‘R&AW’ (ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ಸಂಸ್ಥಾಪಕ ರಾಮೇಶ್ವರ್ ನಾಥ್ ಕಾವೊ ಅವರ ರೋಮಾಂಚಕಾರಿ ಜೀವನ ಕಥೆಯನ್ನು ಈಗ ಬೆಳ್ಳಿತೆರೆಗೆ ತರೋಕೆ ರೆಡಿಯಾಗಿದ್ದಾರೆ. ಈ ವಿಷಯವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.

ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ನಿತಿನ್ ಗೋಖಲೆ ಅವರು ಬರೆದಿರೋ ‘R.N. Kao: Gentleman Spymaster’ ಅನ್ನೋ ಪುಸ್ತಕದ ಮೇಲಾಧಾರಿತ ಸಿನಿಮಾ ಮಾಡ್ತೀವಿ ಎಂದು ಮೊದಲು ಹೇಳಿದ್ದು 2020 ರ ಜನವರಿಯಲ್ಲಿ. ಆದರೆ ಕಾರಣಾಂತರಗಳಿಂದ ತಡವಾಗಿದ್ದ ಈ ಪ್ರಾಜೆಕ್ಟ್‌ಗೆ ಈಗ ಫೈನಲ್ ಶೇಪ್ ಸಿಕ್ಕಿದೆ. R&AW ಸಂಸ್ಥೆ ಸ್ಥಾಪನೆಯಾಗಿ 58 ವರ್ಷ ಪೂರೈಸಿದ ಸಂಭ್ರಮದ ದಿನವೇ (ಸೆಪ್ಟೆಂಬರ್ 21) ಕರಣ್ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾ 2028 ರ ಆಗಸ್ಟ್ 11 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. R&AW ಸಂಸ್ಥೆಗೆ 60 ವರ್ಷ ತುಂಬೋ ಮೈಲಿಗಲ್ಲಿನ ವೇಳೆಗೆ ಈ ಸಿನಿಮಾ ತರೋದು ಇಡೀ ಟೀಮ್ ಪ್ಲಾನ್.

ಕರಣ್ ಜೋಹರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಂತೆ, “ಹಿನ್ನೆಲೆಯಲ್ಲಿ ನಿಂತು ಯಾರಿಗೂ ಕಾಣಿಸದಂತೆ ದೇಶಕ್ಕಾಗಿ ದುಡಿದವರು ಅವರು… ಆದರೆ ಇತಿಹಾಸ ಅವರ ಸಾಧನೆಯನ್ನು ಎಂದಿಗೂ ಮರೆಯಲ್ಲ. R&AW ಸಂಸ್ಥೆಗೆ 58 ವರ್ಷ ತುಂಬಿರೋ ಈ ಶುಭದಿನದಂದು R.N. Kao ಅವರ ರಿಯಲ್ ಸಾಹಸ ಕಥೆಯನ್ನು ನಿಮ್ಮ ಮುಂದೆ ತರೋಕೆ ಖುಷಿಯಾಗ್ತಿದೆ. ನಿತಿನ್ ಗೋಖಲೆ ಅವರ ಪುಸ್ತಕ ಆಧರಿಸಿದ ಈ ಸ್ಪೈ ಥ್ರಿಲ್ಲರ್ ಸಿನಿಮಾ 2028 ರ ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಧಮಾಕ ಮಾಡಲಿದೆ” ಎಂದು ಹೇಳಿದ್ದಾರೆ.

ಈ ಚಿತ್ರದ ಕಥೆ 1955 ರಿಂದ ಆರಂಭವಾಗಿ 1971 ರವರೆಗಿನ ರೋಮಾಂಚನಕಾರಿ ಘಟನೆಗಳನ್ನು ತೋರಿಸಲಿದೆ. ಭಾರತದಲ್ಲಿ R&AW ಸಂಸ್ಥೆ ಹೇಗೆ ಹುಟ್ಟಿಕೊಂಡಿತು, ಅದಕ್ಕೆ ಕಾರಣವಾದ ಸನ್ನಿವೇಶಗಳೇನು ಮತ್ತು 1971 ರ ಭಾರತ-ಪಾಕಿಸ್ತಾನ್ ಯುದ್ಧದಲ್ಲಿ R&AW ಮಾಡಿದ ಮೊದಲ ಬೃಹತ್ ಸೀಕ್ರೆಟ್ ಆಪರೇಷನ್ ಹೇಗಿತ್ತು ಅನ್ನೋದನ್ನ ಕಣ್ಣಿಗೆ ಕಟ್ಟುವಂತೆ ತೋರಿಸಲಿದ್ದಾರಂತೆ.

ಈ ಚಿತ್ರವನ್ನು ಧರ್ಮಾ ಪ್ರೊಡಕ್ಷನ್ಸ್ ಜೊತೆಗೆ ‘ಲಿಯೋ ಮೀಡಿಯಾ ಕಲೆಕ್ಟಿವ್’ ಸಂಸ್ಥೆ ಜಂಟಿಯಾಗಿ ನಿರ್ಮಿಸುತ್ತಿದೆ. ಕಳೆದ ಎರಡು ವರ್ಷಗಳಿಂದಲೇ ಕಥೆಯ ಬಗ್ಗೆ ರಿಸರ್ಚ್ ಮತ್ತು ಸ್ಕ್ರಿಪ್ಟ್ ಕೆಲಸಗಳು ಭರದಿಂದ ಸಾಗುತ್ತಿವೆಯಂತೆ. 2026 ರ ಜೂನ್-ಜುಲೈ ವೇಳೆಗೆ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಆದರೆ, ಈ ಚಿತ್ರದ ನಿರ್ದೇಶಕ ಯಾರು? ಆರ್.ಎನ್. ಕಾವೊ ಪಾತ್ರದಲ್ಲಿ ನಟಿಸೋ ಆ ನಟ ಯಾರು? ಅನ್ನೋದನ್ನ ಮೇಕರ್ಸ್ ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಮೂಲಗಳ ಪ್ರಕಾರ ಬಾಲಿವುಡ್‌ನ ಟಾಪ್ ಎ-ಲಿಸ್ಟ್ ಹೀರೋ ಈ ಬಯೋಪಿಕ್‌ನಲ್ಲಿ ನಟಿಸೋದು ಖಚಿತ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !