ಅನ್‌ಸ್ಟಾಪಬಲ್ ಆದಿತ್ಯ| ಎರಡನೇ ಕಕ್ಷೆಯನ್ನು ಪ್ರವೇಶಿಸಿದ ನೌಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ-೩ ಸಕ್ಸಸ್ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್ 1 ನೌಕೆಯನ್ನು ಉಡಾವಣೆ ಮಾಡಿದೆ.

ಇದೀಗ ಆದಿತ್ಯ ಯಶಸ್ವಿಯಾಗಿ ಸೂರ್ಯನ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ. ಮಧ್ಯರಾತ್ರಿ 2:45ಕ್ಕೆ ಆದಿತ್ಯ ಎಲ್-1 ಸೂರ್ಯನ ಎರಡನೇ ಕಕ್ಷೆಯನ್ನು ಪ್ರವೇಶಿಸಿದ್ದು, ನೌಕೆಯ ಪ್ರಯಾಣ ಇದೀಗ ಮುಂದುವರಿಯುತ್ತದೆ. ಇನ್ನು ಐದು ದಿನಗಳ ನಂತರ, ಅಂದರೆ ಸೆ.10ರಂದು ಮೂರನೇ ಕಕ್ಷೆಯನ್ನು ಆದಿತ್ಯ ಪ್ರವೇಶಿಸುತ್ತದೆ. ಸೆ.3ರಂದು ಆದಿತ್ಯ ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತ್ತು.

 

ಸೌರ ವೀಕ್ಷಣಲಾಯವನ್ನು ಸೂರ್ಯ-ಭೂಮಿ ಎಲ್1 ಪಾಯಿಂಟ್‌ನಲ್ಲಿ ಸ್ಥಾಪಿಸಿ ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುವುದು ಇಸ್ರೋ ಮಿಷನ್‌ನ ಗುರಿಯಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮೊದಲ ಸನ್ ಮಿಷನ್ ಆದಿತ್ಯ-ಎಲ್1 ಸೆ.3 ರಂದು ಉಡಾವಣೆ ಮಾಡಲಾಗಿತ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!