Monday, October 2, 2023

Latest Posts

ಓಣಂ ಹಬ್ಬಕ್ಕಾಗಿ ಕೊಚುವೇಲಿ-ಬೆಂಗಳೂರು ನಡುವೆ ಓಡಾಡಲಿದೆ ವಿಶೇಷ ರೈಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳದಲ್ಲಿ ಅತ್ಯಂತ ಸಂಭ್ರಮದಲ್ಲಿ ಆಚರಿಸುವ ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಸುಲಭವಾಗುವಂತೆ ಕೊಚುವೇಲಿ ಹಾಗೂ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಿಶೇಷ (06083/ 06084) ರೈಲುಗಳ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯ ನಿರ್ಧರಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ನೈರುತ್ಯ ರೈಲ್ವೆ, ‘ರೈಲು ಸಂಖ್ಯೆ 06083 (ಕೊಚುವೇಲಿ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು) ಸಾಪ್ತಾಹಿಕ ಓಣಂ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 22, 29 ಮತ್ತು ಸೆ.5ರಂದು ಪ್ರತಿ ಮಂಗಳವಾರ ಸಂಜೆ 6:05 ಕ್ಕೆ ಕೊಚುವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 10:55 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣ ತಲುಪಲಿದೆ.

ಈ ಮಾರ್ಗದಲ್ಲಿ ಕೊಲ್ಲಂ, ಕಾಯಂಕುಲಂ, ಮಾವೇಲಿಕರ, ಚೆಂಗನ್ನೂರ್, ತಿರುವಳ್ಳ, ಚೆಂಗನಸೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಅಲುವಾ, ತ್ರಿಶೂರ್, ಪಾಲಕ್ಕಾಡ್, ಪೊದನೂರು, ತಿರುಪ್ಪೂರ್, ಈರೋಡ್, ಸೇಲಂ, ತಿರುಪತ್ತೂರ್, ಬಂಗಾರಪೇಟೆ, ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ರೈಲು ಸಂಖ್ಯೆ 06084 (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕೊಚುವೇಲಿ ಓಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು) ಆಗಸ್ಟ್‌ 23, 30 ಮತ್ತು ಸೆ. 6ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 12:45 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 6 ಕ್ಕೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲುಗಳು 20 ಬೋಗಿಗಳ ಸಂಯೋಜನೆ ಹೊಂದಿರಲಿದೆ. 16-ಎಸಿ 3 ಟೈಯರ್‌ ಗರೀಬ್ ರಥ ಬೋಗಿಗಳು, 2-ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿಗಳು ಮತ್ತು 2-ಜನರೇಟರ್ ಕಾರ್‌ನೊಂದಿಗೆ ಲಗೇಜ್ ಕಮ್ ಬ್ರೇಕ್-ವ್ಯಾನ್ ಇರಲಿವೆ. ಈ ವಿಶೇಷ ರೈಲಿನ ದರವು 1.3 ರಷ್ಟು ಹೆಚ್ಚು ಇರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!