October 11, 2026
Sunday, October 11, 2026
spot_img

ಹಬ್ಬದ ಸಂಭ್ರಮಕ್ಕೆ ಸ್ಪೆಷಲ್ ರುಚಿ.. ಮನೆಯಲ್ಲೇ ಮಾಡಿ ನೋಡಿ ಮಾಲ್ಪುರಿ ಸ್ವೀಟ್ ರೆಸಿಪಿ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು

ಸಕ್ಕರೆ

ಏಲಕ್ಕಿ ಪುಡಿ

ಹಾಲು

ಎಣ್ಣೆ

ಒಣದ್ರಾಕ್ಷಿ, ಗೋಡಂಬಿ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಅರ್ಧ ಕಪ್ ಸಕ್ಕರೆ, ಏಲಕ್ಕಿ ಪುಡಿ ಮತ್ತು ಹಾಲನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಯಾವುದೇ ಗಂಟಿಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ ಕಲಸಿ 30 ನಿಮಿಷ ನೆನೆಯಲು ಬಿಡಿ. ಮತ್ತೊಂದು ಪಾತ್ರೆಯಲ್ಲಿ ಅರ್ಧ ಕಪ್ ಸಕ್ಕರೆ ಮತ್ತು ಅರ್ಧ ಕಪ್ ನೀರು ಹಾಕಿ ಕುದಿಸಿ, ಜಿಗುಟಾದ ಸಕ್ಕರೆ ಪಾಕ ತಯಾರಿಸಿ ಪಕ್ಕಕ್ಕಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸೌಟಿನಲ್ಲಿ ಸ್ವಲ್ಪ ಹಿಟ್ಟನ್ನು ತೆಗೆದು ಬಿಸಿಯಾದ ಎಣ್ಣೆಯ ಮಧ್ಯಭಾಗಕ್ಕೆ ಸುರಿಯಿರಿ. ಉರಿಯನ್ನು ಮಧ್ಯಮದಲ್ಲಿಟ್ಟು ಎರಡೂ ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಗರಿಗರಿಯಾಗಿ ಕರಿಯಿರಿ. ಕರಿದ ಮಾಲ್ಪುರಿಯನ್ನು ನೇರವಾಗಿ ಸಕ್ಕರೆ ಪಾಕದಲ್ಲಿ ಹಾಕಿ, 1 ನಿಮಿಷ ಬಿಟ್ಟು ಹೊರತೆಗೆದರೆ ರುಚಿಯಾದ ಮಾಲ್ಪುರಿ ಸ್ವೀಟ್ ಸಿದ್ಧ!

Must Read