ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಪಾಕಿಸ್ತಾನದ (Pakistan) ಕರಾಚಿ (Karachi) ನಗರದಲ್ಲಿ ಉಚಿತ ಪಡಿತರ ವಿತರಣಾ ಅಭಿಯಾನದ (free ration distribution) ವೇಳೆ ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ.
ಪಡಿತರ ವಿತರಣಾ ಕೇಂದ್ರದಲ್ಲಿ ಕಾಲ್ತುಳಿತದ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಪ್ರಜ್ಞಾಹೀನರಾಗಿದ್ದಾರೆ ಎಂದು ಪಾಕಿಸ್ತಾನದ ಎಕ್ಸ್‌ಪ್ರೆಸ್ ನ್ಯೂಸ್ ವರದಿ ಮಾಡಿದೆ.
ಈ ಘಟನೆಯು ಕರಾಚಿಯ SITE (ಸಿಂಧ್ ಇಂಡಸ್ಟ್ರಿಯಲ್ ಟ್ರೇಡಿಂಗ್ ಎಸ್ಟೇಟ್) ಪ್ರದೇಶದಲ್ಲಿ ನಡೆದಿದೆ.
ಪಡಿತರವನ್ನು ಸಂಗ್ರಹಿಸಲು ಹಲವಾರು ಜನರು ಕಾರ್ಖಾನೆಗೆ ಮುಗಿಬಿದ್ದು, ರಂಜಾನ್ ಮಾಸ ಪ್ರಯುಕ್ತ ಪಡಿತರ ವಿತರಣೆ ನಡೆದಿತ್ತು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಕರಾಚಿ ಪೊಲೀಸರು ಬಂಧಿಸಿದ್ದಾರೆ.