ಮೇಘನಾ ಶೆಟ್ಟಿ ಶಿವಮೊಗ್ಗ
ಗಾಡಿ ಓಡಿಸುತ್ತಾ ಕೆಲಸದಿಂದ ಮನೆಗೆ ಬರುವಾಗ ಜಡಿ ಮಳೆ ಶುರುವಾಗಿ ಹೋಯ್ತು.. ಗಾಡಿ ಎಲ್ಲಾದ್ರೂ ಸೈಡ್‌ಗೆ ಹಾಕ್ಬೇಕು ಆದರೆ ಹಾಕ್ತಿಲ್ಲ.. ಕಣ್ಣು ಏನನ್ನೋ ಹುಡುಕುತ್ತಿದೆ.. ಗಾಡಿ ಪಾರ್ಕಿಂಗ್ ಜಾಗಕ್ಕಂತೂ ಅಲ್ಲ, ಮತ್ತೆಲ್ಲಿಗೆ? ಎಲ್ಲಾದ್ರೂ ಕಾಫಿ ಘಮ ಮೂಗಿಗೆ ಬೀಳತ್ತಾ? ಪರಿಮಳ ಸಿಕ್ಕ ತಕ್ಷಣವೇ ಗಾಡಿಗೆ ಲಗಾಮು.. ಬಿಸಿ ಬಿಸಿ ಫಿಲ್ಟರ್ ಕಾಫಿಯ ಮೊದಲ ಸಿಪ್‌ನಲ್ಲಿ ಪುಟ್ಟ ಖುಷಿಯಿದೆ..
ನಿಮ್ಮ ಪ್ರಕಾರ ಸಂತಸದ ಕ್ಷಣ ಯಾವುದು? ಇದು ಮನೆ ಬಂಗಾರ ಸೈಟ್ ಆ ರೀತಿ ಖುಷಿಯ ಬಗೆಗಿನ ಮಾತಲ್ಲ.. ಜಸ್ಟ್ ಸಿಂಪಲ್ ಖುಷಿ.. ಹೊರಗಡೆ ಥಂಡಿ ವಾತಾವರಣ, ನೀವು ಪುಸ್ತಕ ಪ್ರೇಮಿಯಾಗಿದ್ರೆ ಕೈಯಲ್ಲೊಂದು ಪುಸ್ತಕ, ಸಿನಿಮಾ ಪ್ರಿಯರಾಗಿದ್ರೆ ಟಿವಿ ಆನ್ ಆಗಿದೆ ಅಂದುಕೊಳ್ಳಿ. ಇಂದು ರಜೆ ದಿನ, ಯಾವ ಕೆಲಸವೂ ಇಲ್ಲ, ಯಾವ ಟೆನ್ಷನ್ ಇಲ್ಲ, ಮನೆಯಲ್ಲಿ ಒಬ್ಬರೇ ಇದ್ದೀರಿ, ಹೊಟ್ಟೆವರೆಗೂ ಬೆಡ್‌ಶೀಟ್ ಹೊದ್ದು, ಕೈಯಲ್ಲಿ ದೊಡ್ಡ ಕಾಫಿ ಕಪ್ ಹಿಡಿದು ಕುಳಿತಿದ್ದೀರಿ.. ಕಾಫಿ ತುಂಬಾ ಬಿಸಿ ಇದೆ, ಕುಡಿಯುವ ಮುನ್ನ ಅದರ ವಾಸನೆ ನಿಮ್ಮನ್ನು ಇನ್ಯಾವುದೋ ಲೋಕಕ್ಕೆ ಕರೆದೊಯ್ಯುತ್ತದೆ. ತುಟಿಯಿಂದ ಉಫ್ ಉಫ್ ಎಂದು ಲೋಟವನ್ನು ಬಾಯಿಗಿಡುತ್ತೀರಿ.. ಮೊದಲ ಸಿಪ್ ಮ್ಯಾಜಿಕ್ ಮಾಡುತ್ತದೆ, ಕಡೆಯ ಸಿಪ್‌ವರೆಗೂ ಮ್ಯಾಜಿಕ್ ಇರುತ್ತದೆ.. ಇಮ್ಯಾಜಿನ್ ಮಾಡಿ.. ಇದಕ್ಕಿಂತ ಖುಷಿ ಸಮಯ ಇನ್ನೆಲ್ಲಿದೆ?
ದುಬಾರಿ ಕಾಫಿ ಕುಡಿಯೋದಕ್ಕೆ ಹೋಗೋದಿಲ್ಲ, ಕಾಸ್ಟ್ಲಿ ಅಥವಾ ಅಷ್ಟು ಸಣ್ಣ ಲೋಟ ಕಾಫಿ ಕುಡಿಯೋದಕ್ಕೆ ಮನಸ್ಸು ಬರೋದಿಲ್ಲ ಅಂತೀರಾ? ಒಕೆ ಬಟ್ ಲೈಫ್ ಅಲ್ಲಿ ಒಮ್ಮೆಯಾದ್ರೂ ಈ ಎಕ್ಸ್‌ಪೀರಿಯನ್ಸ್ ಮಾಡಿ.. ಕಾಫಿ ಬಣ್ಣದ್ದೇ ಆಂಬಿಯನ್ಸ್, ಎಲ್ಲೂ ರೆಸ್ಟೋರೆಂಟ್‌ಗಳ ರೀತಿ ಕಣ್ಚುಚ್ಚುವ ಬೆಳಕಿಲ್ಲ. ಡಿಮ್ ಲೈಟ್.. ಕಂಫರ್ಟಬಲ್ ಚೇರ್ಸ್, ಈಗಿನ ಜನರೇಷನ್ ಇದನ್ನು ಏಸ್ತೆಟಿಕ್ ಅಂತಾರೆ. ಈ ರೀತಿ ಸ್ಥಳಗಳ ದೊಡ್ಡ ಗ್ಲಾಸ್ ಡೋರ್ ತಳ್ಳಿ ಒಳಕ್ಕೆ ಬಂದದ್ದೇ ಕಾಫಿಯ ಘಮ ಮೂಗಿಗೆ ಬಡಿಯುತ್ತದೆ. ಆರ್ಡರ್ ಮಾಡಿ ಬಂದು ಕೂತರೆ ಎಷ್ಟೊತ್ತಿಗೆ ಕಾಫಿ ಸಿಗ್ತದೋ ಎನಿಸುತ್ತದೆ.. ನಿಮ್ಮ ಜೊತೆಗೆ ನಿಮ್ಮ ಪ್ರೀತಿ ಜೋಡಿಯಿದ್ದರೆ ಕಾಫಿ ರುಚಿ ಇನ್ನಷ್ಟು ಹೆಚ್ಚಾದಂತೆ ಅನಿಸುತ್ತದೆ.. ಅಲ್ವಾ?
ಎಷ್ಟೊಂದು ಪ್ರೇಮಕಥೆಗಳು ಕಾಫಿಯಿಂದ ಆರಂಭವಾಗಿವೆ, ಎಷ್ಟೊಂದು ಜನರ ದಿನ ಶುರುವಾಗೋದು ಒಂದು ಕಪ್ ಕಾಫಿ, ಕೈಲೊಂದು ನ್ಯೂಸ್‌ಪೇಪರ್‌ನಿಂದ. ದಿನವಿಡೀ ದುಡಿದ ಸುಸ್ತು ಹೋಗೋಕೆ ಈಗಲೂ ಎಷ್ಟೊಂದು ಮಂದಿ ಒಂದು ಕಪ್ ಕಾಫಿಯನ್ನೇ ಪ್ರಿಫರ್ ಮಾಡ್ತಾರೆ, ಮಲೆನಾಡಿಗರ ಫಸ್ಟ್ ಲವ್ ಕಾಫಿನೇ, ಕೆಲಸದ ಮಧ್ಯೆ ಸ್ನೇಹಿತರ ಜೊತೆ ಒಂದೆರಡು ಖುಷಿ ನಿಮಿಷಗಳನ್ನು ಕಳೆಯೋದಕ್ಕೆ ಕಾಫಿ ಬ್ರೇಕ್ ಹೆಲ್ಪ್ ಮಾಡುತ್ತದೆ, ಜನರ ತಲೆನೋವಿಗೆ ರಾಮಬಾಣ ಕಾಫಿ, ಮನೆಗೆ ಬಂದ ನೆಂಟರಿಗೆ ಪ್ರೀತಿಯ ಆಹ್ವಾನ ಕಾಫಿ, ವಾಕಿಂಗ್ ಹೋಗಿ ಬಂದ ರಿಟೈರ್ಡ್ ಮೆನ್‌ಗಳಿಗೆ ಕಾಫಿ ಹೊಟೇಲ್ ರೆಗ್ಯುಲರ್ ಅಡ್ಡ..
ಕಾಫಿ ರುಚಿ ಅಥವಾ ವಾಸನೆ ಬಗ್ಗೆ ಬರೀ ಹೈಪ್ ಕೊಡ್ತಿಲ್ಲ, ಇದರಲ್ಲಿ ಆರೋಗ್ಯಕ್ಕೆ ಬೇಕಾದ ಗುಣಗಳೂ ಇವೆ. ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆ ಬಾರದಂತೆ ಕಾಪಾಡುತ್ತದೆ. ನೆನಪಿನ ಶಕ್ತಿ,ಫೋಕಸ್ ಹೆಚ್ಚು ಮಾಡುತ್ತದೆ. ಲಿವರ್‌ನ್ನು ಫ್ಯಾಟ್ ಆಗದಂತೆ ಪ್ರೊಟೆಕ್ಟ್ ಮಾಡುತ್ತದೆ.ಇನ್ನು ಸಾಕಷ್ಟು ಲಾಭಗಳಿವೆ.
ಮತ್ಯಾಕೆ ತಡ ಈಗಲೇ ಹೋಗಿ ಒಂದು ಕಪ್ ಕಾಫಿ ಹೀರಿಬಿಡಿ..ಇನ್ನಷ್ಟು ಸುಮಧುರ ನೆನಪುಗಳನ್ನು ನಿಮ್ಮ ಜೀವನದ ಬ್ಯಾಗ್‌ನಲ್ಲಿ ಜೋಡಿಸುತ್ತಾ ಹೋಗಿ..