ಕೇರಳದಲ್ಲೊಂದು ವಿಲಕ್ಷಣ ಘಟನೆ: ತನ್ನದೇ ಚಿತೆ ನಿರ್ಮಿಸಿ ಅದಕ್ಕೇ ಹಾರಿ ವ್ಯಕ್ತಿ ಆತ್ಮಹತ್ಯೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತನ್ನ ಸ್ವಂತ ಚಿತೆಯನ್ನು ಸಿದ್ಧಪಡಿಸಿ ಬೆಂಕಿ ಹಚ್ಚಿ ಅದಕ್ಕೇ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆಯೊಂದು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

ಮರನಾಡ್ ಸಮೀಪದ 68 ವರ್ಷ ವಯಸ್ಸಿನ ಪುತ್ತು ಆತ್ಮಹತ್ಯೆ ಮಾಡಿಕೊಂಡವರು.

ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ ಕುಮಾರ್, ಯಾವುದೇ ಕೆಲಸಕ್ಕೂ ತೆರಳದೆ ತನ್ನ ಜಮೀನಿನಲ್ಲಿರುವ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಈ ನಡುವೆ ಮಧ್ಯರಾತ್ರಿಯ ವೇಳೆಗೆ ಅವರ ಮನೆಯ ಪಕ್ಕದಲ್ಲಿರುವ ಸಹೋದರಿಯ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಯಾವುದೋ ಮರಕ್ಕೆ ಬೆಂಕಿ ಹತ್ತಿಕೊಂಡಿದೆ ಎಂದು ಅದನ್ನು ಆರಿಸಿ ವಾಪಸ್ಸಾಗಿದ್ದರು. ಆದರೆ ಬೆಳಗ್ಗೆಯ ಹೊತ್ತಿಗೆ ನೋಡಿದಾಗ ಅಲ್ಲಿ ವಿಜಯಕುಮಾರ್ ಅವರ ಮೃತದೇಹ ಪತ್ತೆಯಾಗಿದೆ.

ಈ ನಡುವೆ ಸ್ನೇಹಿತರೋರ್ವರನ್ನು ಉಲ್ಲೇಖಿಸಿ ವಿಜಯ್‌ಕುಮಾರ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಪೊಲೀಸರಿಗೆ ದೊರಕಿದ್ದು, ಅದರಲ್ಲಿ ಆರೋಗ್ಯ ಸಮಸ್ಯೆಯಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!