ಆನೆಯ ರಕ್ಷಣೆಗೆ ಧಾವಿಸಿ ಬಂದುಬಿಟ್ಟಿತು ನೋಡಿ ನಮ್ಮ ಸೇನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ‘ಮೋತಿ’ ಹೆಸರಿನ ಆನೆಯ ಚಿಕಿತ್ಸೆಗೆ ಭಾರತೀಯ ಸೇನೆ ಸಾಥ್ ನೀಡಿದೆ.

35ವರ್ಷದ ಈ ಆನೆ ಅನಾರೋಗ್ಯದಲ್ಲಿ ಬಳಲುತ್ತಿದ್ದು, ಜ.೨೨ರಿಂದ ಇದರ ಆರೈಕೆಯನ್ನು ವನ್ಯಜೀವಿ ಎಸ್‌ಒಎಸ್‌ನ ವೈದ್ಯಕೀಯ ತಂಡ ಮಾಡುತ್ತಿದೆ. ಇದೀಗ ಆನೆಯ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಕಾಣಿಸಿಕೊಂಡಿದ್ದು, ನಿಶ್ಯಕ್ತಿಯಿಂದ ಎದ್ದು ನಿಲ್ಲಲೂ ಕಷ್ಟವಾಗುತ್ತಿದೆ. ಆನೆ ಎದ್ದು ನಿಂತರಷ್ಟೇ ಚಿಕಿತ್ಸೆ ನೀಡಬಹುದಾಗಿದ್ದು, ಈಹಿನ್ನೆಲೆಯಲ್ಲಿ ಈ ತಂಡವು ಭಾರತೀಯ ಸೇನೆಯ ನೆರವು ಕೋರಿತ್ತು.

ಇದಕ್ಕೆ ತಕ್ಷಣ ಸ್ಪಂದಿಸಿದ ಸೇನೆ, ತನ್ನ ಇಂಜಿನಿಯರಿಂಗ್ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದೆ. ಈ ತಂಡವು ಆನೆ ಎದ್ದು ನಿಲ್ಲಲು ಸಹಾಯವಾಗುವ ತಾತ್ಕಾಲಿಕ ವ್ಯವಸ್ಥೆಯನ್ನು ನಿರ್ಮಿಸಿಕೊಟ್ಟಿದೆ.

ಈ ದೃಶ್ಯಗಳನ್ನು ಎನ್‌ಜಿಒ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸೇನೆಯ ಕಾರ್ಯದ ಬಗ್ಗೆ ವ್ಯಾಪಕ ಮೆಚ್ಚುಗೆ ಹರಿದುಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!