ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ವಿಭಜಕಕ್ಕೆ ಸ್ಕೂಟಿ ಡಿಕ್ಕಿಯಾಗಿದ್ದು, ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿದು ತಂದೆಯೂ ಕೂಡ ಮನೆ ಬಿಟ್ಟು ಹೋಗಿದ್ದಾರೆ.
ಕೂರ್ಗಳ್ಳಿಯ ಬೆಮೆಲ್ ಮುಂಭಾಗ ಅಪಘಾತ ಸಂಭವಿಸಿದ್ದು, ಕನಕಗಿರಿ ನಿವಾಸಿ ನಾಗರಾಜು ಪುತ್ರಿ ಕವನಾ ಮೃತಪಟ್ಟಿದ್ದಾರೆ.
ಆಕೆ ಬಿಜಿಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ನಿನ್ನೆ ಬೆಳಗ್ಗೆ ಸ್ನೇಹಿತರ ಜತೆ ಹೋಗುತ್ತಿದ್ದ ವೇಳೆ ಸ್ಕೂಟರ್ ಡಿವೈಡರ್ಗೆ ಡಿಕ್ಕಿಯಾಗಿದೆ. ಡಿಕ್ಕಿಹೊಡೆದ ರಭಸಕ್ಕೆ ಕವನಾಗೆ ತೀವ್ರ ಪೆಟ್ಟು ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಂದೆ ಬರುತ್ತಾರೆ ಎಂದು ಒಂದು ದಿನದಮಟ್ಟಿಗೆ ಮೃತದೇಹವನ್ನು ಹಾಗೆಯೇ ಇಡಲಾಗಿದೆ.