Friday, June 2, 2023

Latest Posts

SHOCKING | ಕ್ಲಾಸ್‌ರೂಂನಲ್ಲೇ ಗರ್ಭಪಾತ, ತೀವ್ರರಕ್ತಸ್ರಾವದಿಂದ ವಿದ್ಯಾರ್ಥಿನಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆಲ್ಲೂರಿನಲ್ಲಿ ವಿದ್ಯಾರ್ಥಿನಿಗೆ ತರಗತಿಯಲ್ಲೇ ಗರ್ಭಪಾತವಾಗಿದ್ದು, ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ. ಖಾಸಗಿ ಕಾಲೇಜೊಂದರಲ್ಲಿ ಬಿ.ಟೆಕ್ ಓದುತ್ತಿದ್ದ ಯುವತಿ ಏಕಾಏಕಿ ತನ್ನ ಸಹಪಾಠಿಗಳು ಹೊರಗೆ ಇದ್ದಾಗ ಕ್ಲಾಸ್‌ರೂಂ ಒಳಹೊಕ್ಕು ಬಾಗಿಲು ಹಾಕಿಕೊಂಡಿದ್ದಾಳೆ.

ಸ್ನೇಹಿತೆ ಕ್ಲಾಸ್‌ರೂಂಗೆ ಹೋಗಿದ್ದನ್ನು ಗಮನಿಸದ ಉಳಿದ ವಿದ್ಯಾರ್ಥಿಗಳು ಅವರ ಪಾಡಿಗೆ ಬೇರೆ ತರಗತಿಗೆ ತೆರಳಿದ್ದಾರೆ. ಎಷ್ಟು ಸಮಯವಾದರೂ ಆಕೆ ಕಾಣಿಸದೇ ಇದ್ದಾಗ ಅವಳನ್ನು ಹುಡುಕಿ ತರಗತಿಗೆ ಬಂದು ಬಾಗಿಲು ತೆಗೆದಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ನೇಹಿತೆಯನ್ನು ನೋಡಿ ಗಾಬರಿಯಾಗಿದ್ದಾರೆ, ಆಕೆ ಪಕ್ಕದಲ್ಲೇ ಭ್ರೂಣವನ್ನು ಕಂಡು ಆಕೆಯ ತಾಯಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಆಕೆಗೆ ನಿಜಕ್ಕೂ ಗರ್ಭಪಾತವಾಗಿತ್ತಾ? ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಯತ್ನಿಸಿದ್ದಳಾ? ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಓದಿ ಉತ್ತಮ ನೌಕರಿ ಹಿಡಿದು ಮಗಳು ನಮ್ಮನ್ನು ಸಾಕುತ್ತಾಳೆ ಎಂದುಕೊಂಡಿದ್ದ ಪೋಷಕರಿಗೆ ಈ ಸಾವು ಬರಸಿಡಿಲಿನಂತೆ ಅಪ್ಪಳಿಸಿದೆ, ಮಗಳನ್ನು ಕಳೆದುಕೊಂಡ ಪೋಷಕರು ದುಃಖ ಆಗಸದೆತ್ತರಕ್ಕಿತ್ತು!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!