ಅಂಕೋಲಾದಲ್ಲಿ ಅನುಮಾನಾಸ್ಪದ ಕಾರೊಂದು ಪತ್ತೆ

ಹೊಸದಿಗಂತ ವರದಿ, ಅಂಕೋಲಾ:

ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಕೆಎ 51 ಎಮ್.ಬಿ 9634 ನಂಬರ್ ಪ್ಲೇಟಿನ ಅನುಮಾನಾಸ್ಪದ ಕಾರೊಂದು ಮಂಗಳವಾರ ಬೆಳಿಗ್ಗೆ ವಿಚಿತ್ರ ಸ್ಥಿತಿಯಲ್ಲಿ ಕಂಡುಬಂದಿರುವ ಘಟನೆ ನಡೆದಿದೆ.

ಕಾರಿನ ರಿಜಿಸ್ಟ್ರೇಷನ್ ನಂಬರ್ ನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸುತ್ತಿದ್ದು ಮಡಿಕೇರಿ ಆರ್.ಟಿ.ಓ ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಇದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಈ ಕಾರಿನ ಬೋನಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ, ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಸೋಮವಾರ ಮಧ್ಯಾಹ್ನದಿಂದ ವಾರಸುದಾರರಿಲ್ಲದೇ ಕಾರು ನಿಂತಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ‌.

ಈ ವಿಷಯವನ್ನು ಸ್ಥಳೀಯರು ಅಂಕೋಲಾ ಪೋಲಿಸ್ ಠಾಣೆಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಉದ್ದಪ್ಪ ಧರೇಪ್ಪನವರ್, ಪಿಎಸ್ಐ ಸುನೀಲ್, ಎ.ಎಸ್.ಐ ರಿತೇಶ ನಾಗೇಕರ್, ಹವಾಲ್ದಾರ ಸಂತೋಷ ಹಾಗೂ ಸಿಬ್ಬಂದಿಗಳು ಮಾಹಿತಿ ಪಡೆದು ಪರಿಶೀಲಿಸಿ, ಪಂಚನಾಮೆ ಮಾಡಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ಪೋಲಿಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!