ಪ್ರಯಾಗ್ ರಾಜ್ ನಲ್ಲಿ ವಿಮಾನ ವಿಳಂಬ: ಊಟ, ನೀರಿಲ್ಲದೇ ಪ್ರಯಾಣಿಕರಪರದಾಟ, ಸಿಬ್ಬಂದಿಗಳ ವಿರುದ್ಧ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸುಮಾರು 10 ಕೋಟಿ ಭಕ್ತರು ಬರುವ ನಿರೀಕ್ಷೆ ಇದೆ. ಈ ಮಧ್ಯೆ ತಾಂತ್ರಿಕ ದೋಷದಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ವಿಳಂಬವಾಗಿದ್ದು, ಪ್ರಯಾಗ್​ರಾಜ್​ಗೆ ತೆರಳಿದ್ದ ಕನ್ನಡಿಗರಿಗೆ ಶಾಕ್ ಎದುರಾಗಿದೆ. ಅನ್ನ ನೀರಿಲ್ಲದೆ ಪರದಾಡಿದ್ದಾರೆ.

ತಾಂತ್ರಿಕ ದೋಷದಿಂದ ಮಧ್ಯಾಹ್ನ 2.10ಕ್ಕೆ ಬೆಂಗಳೂರಿಗೆ ಹೊರಡಬೇಕಿದ್ದ ಸ್ಪೈಸ್​ಜೆಟ್ ವಿಮಾನ SG664 ಹಾರಾಟ ವಿಳಂಬವಾಗಿದೆ. ಗಂಟೆಗಟ್ಟಲೆ ವಿಮಾನ ಹಾರಾಟ ವಿಳಂಬವಾಗಿದ್ದರಿಂದ ಪ್ರಯಾಗ್​ರಾಜ್​ನ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಅನ್ನ ನೀರಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ರಾತ್ರಿ 11.15ಕ್ಕೆ ವಿಮಾನ ಟೇಕಾಫ್ ಆಗುವುದಾಗಿ ಹೇಳುತ್ತಿದ್ದು, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆಲ್ಲದರ ನಡುವೆ ಕುಂಭಮೇಳಕ್ಕೆ ರಾಜ್ಯದಿಂದ ತೆರಳುವ ವಿಮಾನಗಳು ಫುಲ್​ ಆಗಿದ್ದು, ಫ್ಲೈಟ್​​ ಟಿಕೆಟ್​ ಸೋಲ್ಡ್​​ಔಟ್ ಆಗಿವೆ. ಪ್ರತಿದಿನ ಮೂರು ವಿಮಾನಗಳು ಏರ್ಪೋಟ್​ನಿಂದ ಪ್ರಯಾಗ್​ರಾಜ್​ಗೆ ಹಾರಾಟ ಮಾಡುತ್ತಿವೆ. ಇಂಡಿಗೋ ಸಂಸ್ಥೆಯ ಒಂದು, ಸ್ಪೈಸ್ ಜೆಟ್​ ಸಂಸ್ಥೆಯ ಎರಡು ವಿಮಾನಗಳು ಕೆಐಎಬಿಯಿಂದ ಪ್ರಯಾಗ್​ರಾಜ್​ಗೆ ಪ್ರಯಾಣ ಮಾಡುತ್ತಿವೆ.

ಒಬ್ಬರಿಗೆ ಪ್ರಯಾಗ್​ರಾಜ್​ಗೆ ತೆರಳಲು 22 ರಿಂದ 30 ಸಾವಿರ ರೂ. ಟಿಕೆಟ್ ದರ ಇದೆ. ಫೆಬ್ರವರಿ 26ರವರೆಗೂ ಪ್ರಯಾಗ್​ರಾಜ್​ಗೆ ತೆರಳುವ ವಿಮಾನಗಳು ಫುಲ್​​ ರಪ್​​ ಇದ್ದು, ಪ್ರಯಾಗ್​ರಾಜ್ ಹೊರತುಪಡಿಸಿದರೆ, ವಾರಣಾಸಿಗೂ ತೆರಳಿ ಅಲ್ಲಿಂದ ಪ್ರಯಾಗ್​ರಾಜ್​ಗೆ ತೆರಳಬಹುದಾಗಿದೆ. ಕೆಂಪೇಗೌಡ ಏರ್ಪೋಟ್​ನಿಂದ ವಾರಣಾಸಿಗೆ ಪ್ರತಿದಿನ 15 ವಿಮಾನಗಳು ಹಾರಾಟ ಮಾಡುತ್ತಿದ್ದು, ಸದ್ಯ ವಾರಣಾಸಿಗೆ 20 ರಿಂದ 28 ಸಾವಿರ ರೂ ಪ್ರಯಾಣ ದರ ಇದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!