October 19, 2026
Monday, October 19, 2026
spot_img

ಉರುಳಿಬಿತ್ತು ತಿರುಮಲಕ್ಕೆ ಹೋಗ್ತಿದ್ದ ತುಪ್ಪ ತುಂಬಿದ ಟ್ಯಾಂಕರ್‌! ಪಾತ್ರೆ ತುಂಬ ಘೀ ತುಂಬಿಸಿಕೊಂಡ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿದ್ದು, ಜನರು ಪಾತ್ರೆ, ಬಾಟಲಿ ಹಾಗೂ ಡ್ರಮ್‌ಗಳಲ್ಲಿ ತುಪ್ಪ ತುಂಬಿಸಿಕೊಂಡು ಹೋಗಿದ್ದಾರೆ.

ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ ಅನಂತಪುರಂ ಗ್ರಾಮದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಈ ಘಟನೆ ನಡೆದಿದ್ದು, ದುರ್ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ ಗೆ ಗಾಯಗಳಾಗಿವೆ. ಇಬ್ಬರನ್ನೂ ಸ್ಥಳೀಯ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ನಡುವೆ ಅತ್ತ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್ ನಿಂದ ತುಪ್ಪ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಕೈ ಗೆ ಸಿಕ್ಕ ಬಕೆಟ್, ಬಿಂದಿಗೆ, ಕ್ಯಾನ್ ಗಳನ್ನು ಹಿಡಿದು ತುಪ್ಪ ಸಂಗ್ರಹಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಸರಿಸುಮಾರು 21,000 ಲೀಟರ್ ತುಪ್ಪದಲ್ಲಿ ಕೇವಲ 500 ಲೀಟರ್ ಮಾತ್ರ ಉಳಿದಿದೆ.

ಈ ವಿಚಾರ ನೆರೆಹೊರೆಯ ಗ್ರಾಮಗಳಿಗೂ ಕಾಡ್ಗಿಚ್ಚಿನಂತೆ ಹಬ್ಬಿದ್ದು ಬೇರೆ ಬೇರೆ ಗ್ರಾಮದ ನಿವಾಸಿಗಳೂ ಕೂಡ ತುಪ್ಪ ಸಂಗ್ರಹಿಸಲು ಧಾವಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.



Must Read