ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಗೆ ಎಚ್‌ಐವಿ ಪಾಸಿಟಿವ್‌: ಹೇಗೆ ಬಂತು ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಾರಣಾಸಿಯ ಬಾರಗಾಂವ್‌ನಲ್ಲಿ ಯುವಕನೊಬ್ಬಕೈಗಳ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಗೆ ಎಚ್‌ಐವಿ ಟೆಸ್ಟ್‌ ಪಾಸಿಟಿವ್‌ ಬಂದಿದೆ.
ಹೌದು, 20 ವರ್ಷದ ಯುವಕ ಟ್ಯಾಟೂ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ ಆತನಿಗೆ ವಿಪರೀತ ಜ್ವರ, ಸುಸ್ತು ಶುರುವಾಗಿದ್ದು, ಬಳಿಕ ಚಿಕಿತ್ಸೆ ಪಡೆದ್ರೂ ಆರೋಗ್ಯ ಸುಧಾರಿಸದೇ ಇದ್ದಿದ್ರಿಂದ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ . ಈ ವೇಳೆ ಎಚ್‌ಐವಿ ಟೆಸ್ಟ್‌ ಪಾಸಿಟಿವ್‌ ಬಂದಿತ್ತು.

ಆದರೆ ಈತ ಯಾರೊಂದಿಗೂ ದೈಹಿಕ ಸಂಬಂಧ ಹೊಂದಿರಲಿಲ್ಲ. ರಕ್ತವನ್ನು ಸಹ ಆತ ಪಡೆದಿರಲಿಲ್ಲ. ತನಗೆ ಎಚ್‌ಐವಿ ಬಂದಿದ್ಹೇಗೆ ಅನ್ನೋದು ಅವನಿಗೆ ಯಕ್ಷಪ್ರಶ್ನೆಯಾಗಿತ್ತು. ರಿಪೋರ್ಟ್‌ ನೋಡಿ ಯುವಕ ಆಘಾತಕ್ಕೊಳಗಾಗಿದ್ದಾನೆ.

ಈ ವೇಳೆ ಆತ ಹಾಕಿಸಿಕೊಂಡಿದ್ದ ಟ್ಯಾಟೂವನ್ನು ಗಮನಿಸಿದ ವೈದ್ಯರು, ಆ ಟ್ಯಾಟೂವಿನಿಂದ್ಲೇ ಎಚ್‌ಐವಿ ಬಂದಿದೆ ಅಂತಾ ಹೇಳಿದ್ದಾರೆ.
ಇದೇ ರೀತಿ ನಗ್ವಾನ್‌ನಲ್ಲೂ ಟ್ಯಾಟೂ ಹಾಕಿಸಿಕೊಂಡ ಮಹಿಳೆಯೊಬ್ಬಳು ಅನಾರೋಗ್ಯಕ್ಕೀಡಾಗಿ , ಪರೀಕ್ಷೆ ಮಾಡಿಸಿದಾಗ ಅವಳಿಗೂ ಎಚ್‌ಐವಿ ಪಾಸಿಟಿವ್‌ ಬಂದಿದೆ.

ಇದಕ್ಕೆ ಕಾರಣ , ಎಚ್‌ಐವಿ ಸೋಂಕಿತರಿಗೆ ಹಚ್ಚೆ ಹಾಕಲು ಬಳಸಿದ್ದ ಸೂಜಿಯಲ್ಲೇ ಇವರಿಗೆ ಸಹ ಟ್ಯಾಟೂ ಹಾಕಿದ್ದರಿಂದ ಈ ರೀತಿಯಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಟ್ಯಾಟೂ ಹಾಕಲು ಬಳಸುವ ಸೂಜಿ ಕೊಂಚ ದುಬಾರಿ. ನಿಯಮದ ಪ್ರಕಾರ ಒಬ್ಬರಿಗೆ ಟ್ಯಾಟೂ ಹಾಕಿದ ಬಳಿಕ ಆ ಸೂಜಿಯನ್ನು ಬಿಸಾಡಬೇಕು. ಆದರೆ ದುಬಾರಿಯಾದ ಕಾರಣ ಬಳಸಿದ ಸೂಜಿಯನ್ನೇ ಬಳಸಲಾಗುತ್ತಿದೆ.

ಹೀಗಾಗಿ ನೀವೇನಾದ್ರೂ ಟ್ಯಾಟೂ ಹಾಕಿಸಿಕೊಳ್ಳಲು ಬಯಸಿದ್ರೆ ಹೊಸ ಸೂಜಿಯನ್ನು ಬಳಸಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಟ್ಯಾಟೂ ಹಾಕಿಸಿಕೊಂಡ ಬಳಿಕ ಒಮ್ಮೆ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಅಕಸ್ಮಾತ್‌ ಪಾಸಿಟಿವ್‌ ಬಂದರೆ ಕೂಡಲೇ ಚಿಕಿತ್ಸೆ ಆರಂಭಿಸಬಹುದು ಅನ್ನೋದು ವೈದ್ಯರು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!