ಜನರಿಗಾಗಿ ದೇವಾಲಯ,ಇದು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ: ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜಪ್ರಭುತ್ವವಾಗಲಿ ಅಥವಾ ಪ್ರಜಾಪ್ರಭುತ್ವವಾಗಲಿ, ದೇವಾಲಯಗಳು ಜನರಿಗೆ ಮಾತ್ರ ಇರೋದು. ಯಾವುದೇ ರೀತಿಯ ಆಡಳಿತವನ್ನು ಲೆಕ್ಕಿಸದೆ ಅವು ಸಾರ್ವಜನಿಕರಿಗೆ ಇವೆ. ದೇಗುಲಗಳು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹೇಳಿದ್ದಾರೆ.

ಭಾನುವಾರ ತಿರುವನ್ಮಿಯೂರಿನ ಅರುಲ್ಮಿಗು ಮರುಂತೀಶ್ವರರ್ ದೇವಾಲಯದಲ್ಲಿ ನಡೆದ 31 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಾ ಜಾತಿಗಳಿಂದ ಅರ್ಚಕರ ನೇಮಕ ಸೇರಿದಂತೆ ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಕೈಗೊಂಡ ವಿವಿಧ ಕಲ್ಯಾಣ ಕ್ರಮಗಳನ್ನು ಸಹಿಸಲಾಗದ ಕೆಲವು ಶಕ್ತಿಗಳು ಆಧಾರರಹಿತ ಆರೋಪಗಳ ಮೂಲಕ ಡಿಎಂಕೆ ಸರ್ಕಾರದ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ದಿವಂಗತ ಎಂ ಕರುಣಾನಿಧಿ ನೇತೃತ್ವದ ಆಡಳಿತದಲ್ಲಿ ಹೆಚ್ಚಿನ ದೇವಾಲಯಗಳನ್ನು ಸ್ಥಾಪಿಸಲಾಗಿದೆ. 3,700 ಕೋಟಿ ಮೌಲ್ಯದ ಅತಿಕ್ರಮಿತ ದೇವಾಲಯದ ಭೂಮಿಯನ್ನು ಹಿಂಪಡೆದಿದೆ ಮತ್ತು ಸುಧಾರಣಾವಾದಿ ನಾಯಕ ‘ಪೆರಿಯಾರ್’ ಇ ವಿ ರಾಮಸಾಮಿ ಅವರ ಆಶಯದಂತೆ ಮಹಿಳೆಯನ್ನು ಅರ್ಚಕರನ್ನಾಗಿ ನೇಮಿಸಲಾಗಿದೆ. ಎಲ್ಲಾ ಜಾತಿಯ ಪುರುಷರನ್ನು ದೇವಾಲಯದಲ್ಲಿ ಅರ್ಚಕರನ್ನಾಗಿ ನೇಮಿಸಲಾಗಿದೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!