June 22, 2026
Monday, June 22, 2026
spot_img

ಅರ್ಧ ಶತಕ ವರ್ಷಗಳಿಂದ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದ ದೇವಾಲಯ ಮತ್ತೆ ಗೋಚರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಅಂದುಕೊಂಡಂತೆ ಎಲ್ಲ ಜಿಲ್ಲೆಗಳಿಗೂ ಮುಂಗಾರು ಮಳೆ ಬಿದ್ದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿಯೂ ಮುಂಗಾರು ಮಳೆ ವಿಳಂಬವಾಗಿದ್ದು, ಪ್ರಸಿದ್ಧ ಹಿಡಕಲ್‌ ಜಲಾಶಯದ ಒಡಲು ಬರಿದಾಗುತ್ತಿದೆ. ನೀರು ಕಡಿಮೆಯಾದಂತೆಯೇ 51 ವರ್ಷಗಳಿಂದ ಮುಳುಗಡೆಯಾಗಿದ್ದ ದೇವಾಲಯವೊಂದು ಕಾಣಿಸುತ್ತಿದೆ.

ಐತಿಹಾಸಿಕ ವಿಠ್ಠಲ ದೇವಸ್ಥಾನ ಈಗ ಮತ್ತೆ ಕಾಣಿಸುತ್ತಿದ್ದು, ಭಕ್ತರು ದರುಶನಕ್ಕಾಗಿ ಆಗಮಿಸುತ್ತಿದ್ದಾರೆ. ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮದಲ್ಲಿದ್ದ ಈ ವಿಠ್ಠಲ ದೇವಸ್ಥಾನವನ್ನು 1928 ರಲ್ಲಿ ನಿರ್ಮಿಸಲಾಗಿತ್ತು. ತದನಂತರ 1978 ರಲ್ಲಿ ಹಿಡಕಲ್ ಜಲಾಶಯದ ನಿರ್ಮಾಣ ಕಾರ್ಯ ಪೂರ್ಣಗೊಂಡು ನೀರು ತುಂಬಿದಾಗ ಈ ಇಡೀ ದೇವಸ್ಥಾನವು ಜಲಾವೃತಗೊಂಡಿತು. ಜಲಾಶಯ ನಿರ್ಮಾಣವಾದಾಗಿನಿಂದ ಇತಿಹಾಸದಲ್ಲಿ ಇದು ಕೇವಲ ಎರಡನೇ ಬಾರಿ ಮಾತ್ರ ಹೊರಜಗತ್ತಿಗೆ ಕಾಣಿಸಿಕೊಂಡಿದೆ.

2023 ರಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ 48 ವರ್ಷಗಳ ಬಳಿಕ ಮೊದಲ ಬಾರಿಗೆ ಈ ದೇವಸ್ಥಾನ ಗೋಚರವಾಗಿತ್ತು. ಈಗ 2026 ರಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಜಲಾಶಯ ಖಾಲಿಯಾಗುತ್ತಿದ್ದು, ಮತ್ತೊಮ್ಮೆ ದೇವಸ್ಥಾನವು ನೀರಿನಿಂದ ಹೊರಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !