March 25, 2026
Wednesday, March 25, 2026
spot_img

SHOCKING | ಅಮ್ಮನ ಜತೆ ಸೇರಿ ತನ್ನದೇ ಮಗುವನ್ನು ಕಸದ ಬುಟ್ಟಿಗೆ ಎಸೆದ ಹತ್ತನೇ ಕ್ಲಾಸ್‌ ಹುಡುಗಿ!

ಹೈದರಾಬಾದ್‌ನಲ್ಲಿ ಶಾಕಿಂಗ್‌ ಘಟನೆಯೊಂದು ನಡೆದಿದೆ. ಹತ್ತನೇ ತರಗತಿ ವಿದ್ಯಾರ್ಥಿಗೆ ಡೆಲಿವರಿಯಾಗಿದ್ದು, ಮಗುವನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದಾಳೆ.

ಶಾಕಿಂಗ್‌ ಎನಿಸಿದರೂ ನಿಜ! ಪರೀಕ್ಷೆ ಬರೆದು ಬಂದ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಬಂದಿದೆ. ಸ್ಕ್ಯಾನಿಂಗ್‌ ಮಾಡಿಸಿದ ನಂತರವೇ ಅತಿಯಾದ ನೋವು ಬಂದಿದೆ.

ಸ್ಕ್ಯಾನಿಂಗ್‌ ಸೆಂಟರ್‌ನ ಬಾತ್‌ರೂಮ್‌ನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಯಸ್ಕ ಬಾಲಕಿ ತಾಯಿ ಜೊತೆ ಮಗುವನ್ನು ಕಸಕ್ಕೆ ಎಸೆದು ಹೋಗಿದ್ದಾಳೆ.

ಇದನ್ನು ಗಮನಿಸಿದ ಸಿಬ್ಬಂದಿ ತಕ್ಷಣವೇ ಹೋಗಿ ಡಸ್ಟ್‌ಬಿನ್‌ ಚೆಕ್‌ ಮಾಡಿದ್ದಾರೆ. ಅದರಲ್ಲಿ ಗಂಡು ಮಗು ಸಿಕ್ಕಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಗು ಬದುಕಿದೆಯಾ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತಾ? ಪ್ರೀತಿಯನ್ನು ನಂಬಿ ಮೋಸ ಹೋಗಿದ್ದಳೋ? ತನಿಖೆಯಿಂದ ತಿಳಿಯಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !