ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮೆಕ್ಸಿಕೋದ ಸಿನಾಲೋವಾದಲ್ಲಿ ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 20 ಮಂದಿ ಮೃತಪಟ್ಟಿದ್ದಾರೆ.
ಬಸ್ ಹಾಗೂ ಟ್ರಕ್ ಸುಟ್ಟು ಕರಕಲಾಗಿದ್ದು, ಅಪಘಾತದ ತೀವ್ರತೆಯನ್ನು ತೋರಿಸುತ್ತಿದೆ. 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಬೆಳಗಿನ ಜಾವ ಅಪಘಾತ ಸಂಭವಿಸಿದ್ದು, ದಟ್ಟ ಮಂಜು ಇದಕ್ಕೆ ಕಾರಣ ಇರಬಹುದು ಎನ್ನಲಾಗಿದೆ. ಮೃತದೇಹಗಳು ಸುಟ್ಟುಹೋಗಿದ್ದು, ಗುರುತು ಪತ್ತೆಯಾಗಿಲ್ಲ.
#BreakingNow : At least 20 people were killed and 22 injured as a result of a collision between a passenger bus and a trailer on Tuesday morning on the #Mazatlán-Culiacán-Maxipista highway, in the Mexican state of Sinaloa. #Sinaloa #Mexico #busaccident #Maxicocity pic.twitter.com/7d7IRiRi8P
— Ravi Pandey🇮🇳 (@ravipandey2643) January 30, 2024