‘ಡಬಲ್ ಮರ್ಡರ್’ : ಹೆಂಡತಿ, ಪ್ರಿಯಕರನ ಕೊಲೆ ಮಾಡಿ ಗಂಡ ಪರಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯಲ್ಲಿ ಪತಿಯೇ ಪತ್ನಿ ಹಾಗೂ ಪ್ರಿಯಕರನನ್ನು ಬರ್ಬರವಾಗಿ ಹತ್ಯೆಗೈದಿರುವ ಜೋಡಿ ಕೊಲೆ ಪ್ರಕರಣ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಮದುವೆಯಾದ ಒಂದು ತಿಂಗಳೊಳಗೆ ಆತನ ಪತ್ನಿ ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಆದ್ದರಿಂದ ಅವನು ತನ್ನ ಹೆಂಡತಿ ಮತ್ತು ಅವನ ಪ್ರೇಮಿಯನ್ನು ಹತ್ಯೆ ಮಾಡಿದ್ದಾನೆ.

ತೌಫಿಕ್ ಕ್ಯಾಡಿ (24 ವರ್ಷ) ಎಂಬಾತ ತನ್ನ ಪತ್ನಿ ಹೀನಾಕೌಸರ್ ಸುಧಾರಾಣೆ (19) ಮತ್ತು ಯಾಸಿನ ಬಾಗೊಡೆ (21) ಅವರನ್ನು ಕೊಂದಿದ್ದಾನೆ. ಈ ವೇಳೆ ಆತ ತನ್ನ ತಾಯಿ ಅಮಿನಾಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ತೌಫಿಕ್ ಕ್ಯಾಡಿ ಹಂತಕ ಪರಾರಿಯಾಗಿದ್ದಾನೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!