ಬ್ರೆಜಿಲ್‌ನಲ್ಲಿ ಭೀಕರ ಅಗ್ನಿ ಅವಘಡ, ಒಂಬತ್ತು ಮಂದಿ ಸಜೀವ ದಹನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರೆಜಿಲ್‌ನ ಉತ್ತರ ರಾಜ್ಯವಾದ ಪಾರಾದಲ್ಲಿ ಭೂರಹಿತ ಕಾರ್ಮಿಕ ಚಳವಳಿ ಎಂಎಸ್‌ಟಿಗೆ ಸೇರಿದ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂಬತ್ತು ಮಂದಿ ಸಜೀವ ದಹನವಾಗಿದ್ದಾರೆ.

ಪಾರಾಪೇಬಾಸ್ ಪಟ್ಟಣದಲ್ಲಿರುವ ಗ್ರಾಮೀಣ ರೈತರ ಶಿಬಿರದಲ್ಲಿ ಇಂಟರ್ನೆಟ್ ವೈರಿಂಗ್ ಕಾಮಗಾರಿ ವೇಳೆ ಶಾರ್ಟ್ ಸರ್ಕೀಟ್ ಆಗಿ ಬೆಂಕಿ ಹೊತ್ತಿದೆ. ಈ ಘಟನೆಯಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಟೆನಾ ಹೈ ವೋಲ್ಟೇಜ್ ನೆಟ್‌ವರ್ಕ್‌ಗೆ ತಗುಲಿ ವಿದ್ಯುತ್ ತಂತಿಗಳಲ್ಲಿ ಶಾರ್ಟ್ ಸರ್ಕೀಟ್ ಆಗಿ ಗುಡಿಸಲುಗಳಿಗೆ ಬೆಂಕಿ ಬಿದ್ದಿದೆ. ಆರು ಮಂದಿ ಶಿಬಿರದಲ್ಲಿದ್ದವರು ಹಾಗೂ ಮೂವರು ಇಂಟರ್ನೆಟ್ ಕಂಪನಿಯ ಉದ್ಯೋಗಿಗಳು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!