ಹೊಸದಿಗಂತ ವರದಿ, ಮಡಿಕೇರಿ
ಹಾಡಹಗಲೇ ಮನೆಗೆ ನುಗ್ಗಿ ರೂ.2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ.70 ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಶನಿವಾರಸಂತೆ ಸಮೀಪದ ನಂದಿಗುಂದ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾದಪ್ಪ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮಾದಪ್ಪ ಹಾಗೂ ಅವರ ಪತ್ನಿ ಪುಷ್ಪಾ ಮಾ.22 ರಂದು ಕೆಲಸಕ್ಕೆಂದು ಮನೆಗೆ ಬೀಗ ಹಾಕಿ ಬೆಳಗ್ಗೆ ತೆರಳಿದ್ದು, ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಹಿಂಬಾಗಿಲು ಒಡೆದು ಕೋಣೆಯಲ್ಲಿದ್ದ ಗಾಡ್ರೆಜ್ ತೆರೆದು ಲಾಕರ್’ನಲ್ಲಿದ್ದ ರೂ.2 ಲಕ್ಷ ಮೌಲ್ಯದ 22 ಗ್ರಾ ತೂಕದ ತಾಳಿ ಸರ, 8 ಗ್ರಾಂ ಸರ, 17 ಗ್ರಾಂ. ಬಳೆಗಳು, 6 ಗ್ರಾಂ ಕಿವಿಯೋಲೆ, 3 ಉಂಗುರಗಳು, 14 ಗ್ರಾಂ ತೂಕದ ಚಿನ್ನದ ಗುಂಡುಗಳು ಸೇರಿ ಒಟ್ಟು 67 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಅದಲ್ಲದೆ ಕಾಫಿ ಮಾರಿ ಬಂದಿದ್ದ ರೂ.70 ಸಾವಿರ ಹಣವನ್ನೂ ಕಳ್ಳತನ ಮಾಡಲಾಗಿದೆ.
ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು, ಬೆರಳಚ್ಚು ತಜ್ಞರು, ಶ್ವಾನದಳ ತೆರಳಿ ಪರಿಶೀಲನೆ ನಡೆಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ