ಬಾಲ್ಕನಿಯಿಂದ ಬಿದ್ದು ಮೂರು ವರ್ಷದ ಬಾಲಕಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ದೆಹಲಿಯ ಸಾಗರ್‌ಪುರ ಪ್ರದೇಶದಲ್ಲಿ ಅಪಾರ್ಟ್‍ಮೆಂಟ್ ಒಂದರ ಮೂರನೇ ಮಹಡಿಯಿಂದ ಬಿದ್ದು ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಇಡೀ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಗು ಇದ್ದಕ್ಕಿದ್ದಂತೆ ಕೆಳಗಿನ ಬೀದಿಗೆ ಬಿದ್ದಿದೆ. ಸ್ವಲ್ಪ ಹೊತ್ತಿನ ನಂತರ, ಮಹಿಳೆಯೊಬ್ಬಳು ರಕ್ತದ ಮಡುವಿನಲ್ಲಿ ಬಿದ್ದ ಮಗುವನ್ನು ಕಂಡು ಭಯಭೀತಳಾಗಿ ಮಗುವಿನ ಬಳಿ ಓಡಿಬರುತ್ತಾಳೆ. ಸ್ವಲ್ಪ ಸಮಯದ ನಂತರ ಬಾಲಕಿಯ ಕುಟುಂಬದವರು ಘಟನಾ ಸ್ಥಳಕ್ಕೆ ಬರುತ್ತಾರೆ. ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಗು ಸ್ಥಳದಲ್ಲೇ ಸಾವನಪ್ಪಿದೆ ಎಂದು ವೈದ್ಯರು ಕೈ ಚೆಲ್ಲಿದರು.‌

https://x.com/Bhambrisahil941/status/1826493661590286393?ref_src=twsrc%5Etfw%7Ctwcamp%5Etweetembed%7Ctwterm%5E1826493661590286393%7Ctwgr%5E1783154744e98035de3943d6bef34e011c7fcdfb%7Ctwcon%5Es1_&ref_url=https%3A%2F%2Fvistaranews.com%2Flatest%2Fviral-video-3-year-old-girl-dies-after-falling-from-third-floor-balcony-video-goes-viral%2F719950.html

ಬಾಲಕಿ ಮೂರನೇ ಮಹಡಿಯಿಂದ ಬಿದ್ದಿದ್ದು ಹೇಗೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಾಲ್ಕನಿಯಲ್ಲಿ ಒಬ್ಬಂಟಿಯಾಗಿ ಆಡುತ್ತಿದ್ದಾಗ ಬಾಲಕಿ ಆಕಸ್ಮಿಕವಾಗಿ ಬಿದ್ದಿರಬಹುದು. ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಪೊಲೀಸರು ಆ ಪ್ರದೇಶದ ಇತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!