ಐದು ವರ್ಷದಿಂದ ಮೊಸಳೆ ಕುತ್ತಿಗೆಯಲ್ಲಿ ಸಿಲುಕಿದ್ದ ಟೈರ್ ಹೊರತೆಗೆದ ಪ್ರಾಣಿಪ್ರೇಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡೋನೇಷ್ಯಾದ ಪ್ರಾಣಿ ಪ್ರಿಯರೊಬ್ಬರು ತಮ್ಮ ಜೀವವನ್ನು ಪಣಕ್ಕಿಟ್ಟು ಮೊಸಳೆಯೊಂದ ಸರಾಗ ಜೀವನಕ್ಕೆ ಸಹಾಯ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ಮೊಸಳೆಯ ಬಾಯಿಗೆ ಟೈರ್ ಒಂದು ಸಿಕ್ಕಿಹಾಕಿಕೊಂಡಿದ್ದು, ಅದನ್ನು ತೆಗೆಯಲು ಯಾರೂ ಮುಂದೆ ಬಂದಿರಲಿಲ್ಲ. ಆದರೆ ಇಂಡೋನೇಷ್ಯಾದ ತಿಲಿ ಎಂಬುವವರು ಮೊಸಳೆಯ ಕುತ್ತಿಗೆಗೆ ಸಿಲುಕಿದ್ದ ಟೈರ್ ತೆಗೆದಿದ್ದಾರೆ.

A man removes binding from the crocodile’s jaws after freeing the animal from the tyre.ಈ ಹಿಂದೆಯೂ ಎಷ್ಟೋ ಮಂದಿ ಟೈರ್ ತೆಗೆಯಲು ಪ್ರಯತ್ನ ಮಾಡಿ ವಿಫಲರಾಗಿದ್ದರು. ತಿಲಿ ಮರದ ದಿಮ್ಮಿಯ ಮೂಲಕ ಮೊಸಳೆ ಸೆರೆ ಹಿಡಿದು, ಕಣ್ಣಿಗೆ ಬಟ್ಟೆ ಕಟ್ಟಿ ಗರಗಸದ ಮೂಲದ ಟೈರ್ ಕತ್ತರಿಸಿ ಹೊರತೆಗೆದಿದ್ದಾರೆ.

ತಿಲಿ ಒಬ್ಬರೇ ಮೊಸಳೆ ಸೆರೆ ಹಿಡಿದು ಬಾಯಿ, ಕಣ್ಣಿಗೆ ಬಟ್ಟೆ ಕಟ್ಟಿದ್ದು, ನಂತರ ಸ್ಥಳೀಯರು ಸಹಾಯಕ್ಕೆ ಮುಂದಾಗಿದ್ದಾರೆ.ಟೈರ್ ಕತ್ತರಿಸಿ ಮತ್ತೆ ಮೊಸಳೆಯನ್ನು ನೀರಿಗೆ ಬಿಡಲಾಗಿದೆ. ತಿಲಿ ಅವರ ಕೆಲಸಕ್ಕೆ ಪ್ರಾಣಿಪ್ರೇಮಿಗಳು ಮೆಚ್ಚುಗೆ ತಿಳಿಸಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!