ಒಟ್ಟು 10.76 ಲಕ್ಷ ಪ್ರಯಾಣಿಕರಿಗೆ ದಂಡ: ನಮ್ಮ ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸುದ್ದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸುದ್ದಿ ಇದು. BMRCL ಒಟ್ಟು 10.76 ಲಕ್ಷ ಮೆಟ್ರೋ ಪ್ರಯಾಣಿಕರಿಗೆ 5.38 ಕೋಟಿ ರೂ. ದಂಡ ವಿಧಿಸಿದೆ. ಅಷ್ಟೇ ಅಲ್ಲದೆ 11 ತಿಂಗಳೊಳಗೆ ಈ ಹಣವನ್ನು ವಸೂಲಿ ಮಾಡಿದೆ.

BMRCL ನಮ್ಮ ಮೆಟ್ರೋದಲ್ಲಿ ಹಲವಾರು ಸುರಕ್ಷತಾ ನೀತಿಗಳನ್ನು ಜಾರಿಗೆ ತಂದಿದೆ. ನಿಯಮವನ್ನು ಸ್ಥಾಪಿಸಿದ್ದಲ್ಲದೆ, ಶಿಕ್ಷೆಯನ್ನೂ ವಿಧಿಸಲಾಗಿದೆ. ಕಳೆದ ವಾರ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷ ನಿಂತಿದ್ದ ಯುವಕನಿಗೆ 50 ರೂ. ದಂಡ ಹಾಕಿತ್ತು. ಇದಾದ ಬಳಿಕ ಈಗ ಆಸಕ್ತಿಕರ ವಿಚಾರಗಳು ಬಯಲಿಗೆ ಬರುತ್ತಿದೆ.

ಕಳೆದ ವರ್ಷ ಜೂನ್‌ನಿಂದ 10.76 ಲಕ್ಷ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚು ಸಮಯ ಕಳೆದಿರುವ ಕಾರಣಕ್ಕೆ ದಂಡವನ್ನು ವಿಧಿಸಲಾಗಿದೆ. ಪ್ರತಿ ವ್ಯಕ್ತಿಗೆ 50 ರೂ. ದಂಡದ ಮೊತ್ತದಂತೆ ₹5.38 ಕೋಟಿ ಸಂಗ್ರಹವಾಗಿದೆ.

ಈ ನಿಯಮದ ಅಡಿಯಲ್ಲಿ ಸುರಕ್ಷತಾ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ದಂಡವನ್ನು ವಿಧಿಸಲಾಗಿದೆ ಎಂದು BMRCL ಪ್ರತಿಪಾದಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!