ಎನ್‌ಐಎ ಯಿಂದ ಕೊಯಮತ್ತೂರು ಸ್ಫೋಟ ಸಹಿತ ಒಟ್ಟು 497 ಪ್ರಕರಣ ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕೊಯಮತ್ತೂರು ಸ್ಫೋಟ ಸೇರಿದಂತೆ ಒಟ್ಟು 497 ಉಗ್ರ ಕೃತ್ಯ ಸಂಬಂಧಿ ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಇಂದು ರಾಜ್ಯಸಭೆಗೆ ತಿಳಿಸಿದ್ದಾರೆ.

ಡಿಎಂಕೆ ಸದಸ್ಯ ವೈಯಾಪುರಿ ಗೋಪಾಲಸ್ವಾಮಿ, ಎಂ. ಷಣ್ಮುಗಮ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರ್ಷದಿಂದ ವರ್ಷಕ್ಕೆ ಎನ್‌ಐಎ ಕೆಲಸ ಮಾಡುವ ಸಾಮರ್ಥ್ಯವು ಹೆಚ್ಚುತ್ತಿದೆ ಎಂದು ತಿಳಿಸಿದರು.

ಮಾನವ ಕಳ್ಳ ಸಾಗಣೆ, ನಿಷೇಧಿತ ಆಯುಧಗಳ ತಯಾರಿಕೆ ಮತ್ತು ಮಾರಾಟ, ಸೈಬರ್-ಭಯೋತ್ಪಾದನೆ ಸೇರಿದಂತೆ ಇನ್ನಿತರ ಅಪರಾಧಗಳನ್ನೂ ಎನ್‌ಐಎ ತನಿಖೆ ಮಾಡುತ್ತಿರುವುದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಸಚಿವರು ತಿಳಿಸಿದರು.

ಎನ್‌ಐಎ ಟಾರ್ಗೆಟ್ ಮಾಡಿಕೊಂಡು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದ ಸಂಸರಿಗೆ ಉತ್ತರಿಸಿದ ಅವರು, ಎನ್‌ಐಎ ಯಾವುದೇ ಪೂರ್ವಗ್ರಹಪೀಡತವಾಗದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣಗಳನ್ನು ದಾಖಲಿಸುತ್ತದೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!