ವಾಲ್‌ನಟ್ಸ್
ಬಾಳೆಹಣ್ಣು
ಹಾಲು
ಬೆಲ್ಲ ಅಥವಾ ಸಕ್ಕರೆ
ಏಲಕ್ಕಿ ಪುಡಿ
ತುಪ್ಪ
ಗೋಡಂಬಿ ಮತ್ತು ದ್ರಾಕ್ಷಿ
ಮೊದಲಿಗೆ 10-15 ನಿಮಿಷ ಬಿಸಿ ನೀರಿನಲ್ಲಿ ನೆನೆಸಿಟ್ಟ ವಾಲ್‌ನಟ್ಸ್‌ಗಳನ್ನು ಮಿಕ್ಸಿ ಜಾರ್‌ಗೆ ಹಾಕಿ, ಸ್ವಲ್ಪ ಹಾಲು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಒಂದು ಪಾತ್ರೆಗೆ ತುಪ್ಪ ಹಾಕಿ, ಹಾಲು ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಹಾಲು ಸ್ವಲ್ಪ ಗಟ್ಟಿಯಾಗುವವರೆಗೆ ಚೆನ್ನಾಗಿ ಕುದಿಸಿ. ಹಾಲು ಕುದಿ ಬಂದ ಮೇಲೆ, ರುಬ್ಬಿಟ್ಟುಕೊಂಡ ವಾಲ್‌ನಟ್ ಪೇಸ್ಟ್ ಅನ್ನು ಹಾಲಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷ ಬೇಯಿಸಿ, ವಾಲ್‌ನಟ್ ಹಸಿ ವಾಸನೆ ಹೋಗಲಿ. ಈಗ ಬಾಳೆಹಣ್ಣನ್ನು ಸ್ಪೂನ್‌ನಿಂದ ಚೆನ್ನಾಗಿ ಕಿವುಚಿ ಅಥವಾ ಸಣ್ಣಗೆ ಹೆಚ್ಚಿ ಪಾತ್ರೆಗೆ ಹಾಕಿ. ಜೊತೆಗೆ ನಿಮ್ಮ ರುಚಿಗೆ ತಕ್ಕಷ್ಟು ಬೆಲ್ಲದ ಪುಡಿ ಮತ್ತು ಏಲಕ್ಕಿ ಪುಡಿ ಹಾಕಿ ಸಿಮ್‌ನಲ್ಲಿ 2-3 ನಿಮಿಷ ಕುದಿಸಿ. ಸಣ್ಣ ಬಾಣಲೆಯಲ್ಲಿ 1 ಚಮಚ ತುಪ್ಪ ಕಾಯಿಸಿ, ಗೋಡಂಬಿ-ದ್ರಾಕ್ಷಿ ಹುರಿದು ಖೀರ್‌ಗೆ ಹಾಕಿದರೆ,ಘಮಘಮಿಸುವ ‘ವಾಲ್‌ನಟ್ ಬಾಳೆಹಣ್ಣಿನ ಖೀರ್’ ರೆಡಿ!



