ಭಾರಿ ಬಿರುಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರ

ಹೊಸದಿಗಂತ ವರದಿ ಹಾಸನ :

ಬಿರುಗಾಳಿ ಸಹಿತ ಆರ್ಭಟಿಸುತ್ತಿರುವ ಭಾರಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ ಬಿದ್ದಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಹೊಂಕರವಳ್ಳಿ ಗ್ರಾಮದ ಬಳಿ ನಡೆದಿದೆ.

ರಕ್ಷಿಧಿ ಹಫೀಜ್ ಎಂಬುವವರಿಗೆ ಸೇರಿದ KA-53-MH-3629 ನಂಬರ್‌ನ ಕ್ರೇಟಾ ಕಾರಿನ ಮೇಲೆ ಕ್ಯಾಲಿಸುತ್ತಿದ್ದಾಗಲೇ ಗಾಳಿ ಮಳೆಗೆ ಬೃಹತ್ ಮರವೊಂದು ಉರುಳಿದೆ. ಮರ ಬೀಳುತ್ತಿದ್ದಂತೆ ರಸ್ತೆಯಲ್ಲಿಯೇ ಕಾರು ನಿಲ್ಲಿಸಿ ಕೆಳಗಿಳಿದ ರಕ್ಷಿದಿ ಹಫೀಜ್ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬೃಹತ್ ಮರ ಬಿದ್ದಿದ್ದರಿಂದ ಸಂಪೂರ್ಣ ಕಾರು ಜಖಂಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!