ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ: ಹೊರ ಬಂತು ಸವಾರನ ಕರುಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಭಾರೀ ಮಳೆಗೆ ಮರ ಬಿದ್ದು ಯುವಕನೊರ್ವ ಮೃತಪಟ್ಟರೆ, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಕರ್ಲೆ ಗ್ರಾಮದ ಸೋಮನಾಥ್ ಮುಚ್ಚಂಡಿಕರ್ (21) ಮೃತ ದುರ್ದೈವಿ.ವಿಠ್ಠಲ್ ತಳವಾರ್, ಸ್ವಪ್ನಿಲ್ ದೇಸಾಯಿ ಗಾಯಾಳುಗಳು.

ಈ ಮೂವರು ಮಳೆಯಲ್ಲೇ ಬೈಕ್‌ನಲ್ಲಿ ಬೆಳಗಾವಿಗೆ ಬರುತ್ತಿದ್ದರು.ಈ ವೇಳೆ ಏಕಾಏಕಿ ಬೃಹತ್‌ ಗಾತ್ರದ ಮರವೊಂದು ಧರೆಗುರುಳಿ ಬೈಕ್‌ ಮೇಲೆ ಬಿದ್ದಿದೆ.ಮರ ಬಿದ್ದ ರಭಸಕ್ಕೆ ಮುಚ್ಚಂಡಿಕರ್‌ನ ಕರುಳು ಹೊರಗೆ ಬಂದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮತ್ತಿಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ರಸ್ತೆ ಮೇಲೆ ಬಿದ್ದಿದ್ದ ಮರ ತೆರವು ಮಾಡಿದರು.

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!