ಉಕ್ರೇನ್ ನಿಂದ ತಾಯ್ನಾಡಿಗೆ ಬಂದ ಪ್ರಿಯಾ ಪಾಟೀಲ್,ಗೆ ಸನ್ಮಾನ

ಹೊಸದಿಗಂತ ವರದಿ, ಕಲಬುರಗಿ:

ಉಕ್ರೇನ್,ನ ಖಾಕೀ೯ವ್,ನಲ್ಲಿ ನಾಲ್ಕನೇ ವಷ೯ದ ಎಂಬಿಬಿಎಸ್ ವಿದ್ಯಾಬ್ಯಾಸ ಮಾಡುತ್ತಿದ್ದ ಕಲಬುರಗಿ ನಿವಾಸಿಯಾದ ವಿದ್ಯಾರ್ಥಿನಿ ಪ್ರಿಯಾ ಪಾಟೀಲ್ ಅವರು ಮರಳಿ ತಾಯ್ನಾಡಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಬರಮಾಡಿಕೊಳ್ಳಲಾಗಿದೆ.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ತಳಿ ಆವರಣದಲ್ಲಿ ವಿದ್ಯಾರ್ಥಿನಿ ಪ್ರಿಯಾ ಪಾಟೀಲ್ ಅವರ ಪಾಲಕರ ಸಮ್ಮುಖದಲ್ಲಿ ಪೂಜ್ಯ ಸರಡಗಿ ಪೀಠದ ಅಪ್ಪಾರಾವ ಮುತ್ಯಾ ಸಮಕ್ಷಮದಲ್ಲಿ ಬರಮಾಡಿಕೊಳ್ಳಲಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾ ಪಾಟೀಲ್, ನಾನು ಯುದ್ಧ, ದ ಬಗ್ಗೆ ಟಿವಿಯಲ್ಲಿ, ಪತ್ರಿಕೆಯಲ್ಲಿ ಓದುತ್ತಿದ್ದೆ. ಆದರೆ ನನ್ನ ಕಣ್ಣೆದುರಿಗೆ ಬಾಂಬ್ ಸ್ಪೋಟದ ಶಬ್ದಗಳನ್ನು ಕೇಳಿ ನನಗೆ ನಡುಕ ಹುಟ್ಟಿತ್ತು. ಯುದ್ಧ ಘೋಷಣೆ ಬಳಿಕ ನಾನು ಮರಳಿ ವಾಪಸ್ ಬರುತ್ತೇನೆ ಅಥವಾ ಇಲ್ಲವೋ ಎಂಬ ನಂಬಿಕೆ ನನಗೆ ಇರಲಿಲ್ಲ. ಆದರೆ ಸೇಫ್ ಆಗಿ ಮನೆಗೆ ಬಂದಿರುವುದಕ್ಕೆ ನಾನು ಭಾರತ ಸಕಾ೯ರಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.

ಯುದ್ದದಲ್ಲಿನ ಸಮಯದಲ್ಲಿ ನಾನು ಮೆಟ್ರೋ ಸ್ಟೇಷನ್, ನಲ್ಲಿ ಎರಡು ದಿನಗಳ ಕಾಲ ಕಳೆದಿದ್ದೇನೆ.ಅದಾದ ಬಳಿಕ ಎಂಟು ದಿನಗಳ ಕಾಲ ಬಂಕರ್ ನಲ್ಲಿ ಇದ್ದಿದ್ದೆ.ತದನಂತರ ಪೋಲ್ಯಾಂಡ ಗಡಿಯ ಮೂಲಕ ಭಾರತದ ರಾಯಭಾರಿ ನನಗೆ ನನ್ನ ಮನೆಗೆ ಕಳುಹಿಸಿ ಕೊಟ್ಟಿದೆ ಎಂದರು.

ಭಾರತ ಸರಕಾರದ ಬಳಿ ನನ್ನ ಮನವಿ ಎನಂದರೇ, ಮುಂದಿನ ವಿದ್ಯಾಬ್ಯಾಸ ಕಲಿಯುವುದಕ್ಕೆ ವಗಾ೯ವಣೆ ಮಾಡಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಇನ್ನೂ ಇದೇ ಸಂದರ್ಭದಲ್ಲಿ ಪ್ರಿಯಾ ಪಾಟೀಲ್ ಅವರ ತಂದೆ ಶಿವರಣಪ್ಪಾ ಪಾಟೀಲ್ ಹಾಗೂ ನಿಮ೯ಲಾ ಪಾಟೀಲ್ ಮಾತನಾಡಿ, ಉಕ್ರೇನ್,ನ ಮೇಲೆ ರಷ್ಯಾ ಯುದ್ಧ ಸಾರಿದಾಗ.ನಮ್ಮ ಮಗಳ ಚಿಂತೆ ನಮಗೆ ಬಹಳ ಕಾಡುತ್ತಿತ್ತು. ಅವಳೂ ಹೇಗಿದ್ದಾಳೆ,ಎನ್ ಮಾಡತಿದಾಳೆ ಎಂಬ ಆತಂಕದಲ್ಲಿ ನಾವಿದ್ದೇವೂ. ಅವಳು ಸುರಕ್ಷಿತವಾಗಿ ಮನೆಗ ಬಂದರೆ ಸಾಕು ಎಂದು ದೇವರ ಹತ್ತಿರ ಬೇಡಿಕೊಂಡಿದ್ದೆವೆ ಎಂದು ಹೇಳಿದ್ದಾರೆ.

ಇನ್ನೂ ಭಾರತ ಸರಕಾರ ನಮ್ಮ ಮಗಳನ್ನು ಸುರಕ್ಷಿತವಾಗಿ ನಮ್ಮ ಮನೆಗೆ ಕಳುಹಿಸಿಕೊಟ್ಟ ಹಿನ್ನೆಲೆಯಲ್ಲಿ ಸರಕಾರದ ವ್ಯವಸ್ಥೆ ಗೆ ಪಾಲಕರು ಅಭಿನಂದನೆಗಳು ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!