ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯಲಹಂಕ ಲಾಡ್ಜ್ ನಲ್ಲಿ ಬೆಂಕಿ ದುರಂತದಲ್ಲಿ ಜೋಡಿ ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಬೆಂಗಳೂರಿನ ಯಲಹಂಕ ನ್ಯೂಟೌನ್ನಲ್ಲಿರೋ ಕೂಲ್ ಕಂಫರ್ಟ್ ಎಂಬ ಚಿಕ್ಕ ಲಾಡ್ಜ್, ಇದೇ ಲಾಡ್ಜ್ನ ರೂಂನಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬೆಂಕಿ ಅವಘಡ ಸಂಭವಿಸಿದೆ. ಈ ಬೆಂಕಿ ಅನಾಹುತದಲ್ಲಿ 30 ವರ್ಷದ ರಮೇಶ್ ಮತ್ತು ಕಾವೇರಿ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ. ಅವನದ್ದು ಗದಗ ಮತ್ತು ಆಕೆಯದ್ದು ಬಾಗಲಕೋಟೆಯ ಹುನಗುಂದ. ಈ ಇಬ್ಬರು ಒಂದು ವಾರದಿಂದ ಇದೇ ಲಾಡ್ಜ್‌ನಲ್ಲಿ ವಾಸವಿದ್ದರು. ನಿನ್ನೆ ಬೆಳಗ್ಗೆ ಇಬ್ಬರಿಗೂ ಜಗಳ ಆಗಿದೆ ಎನ್ನಲಾಗಿದೆ.
ಕಾವೇರಿಗೆ 2016 ರಲ್ಲೇ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಆದ್ರೆ, ದುಡಿಯೋ ಸಲುವಾಗಿ ಗಂಡ ಮಕ್ಕಳನ್ನ ಊರಲ್ಲಿ ಬಿಟ್ಟು ಬೆಂಗಳೂರಿಗೆ ಬಂದು ಸ್ಪಾವೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಬಳಿಕ ಗಾರೇ ಕೆಲಸ ಮಾಡುತ್ತಿದ್ದ ರಮೇಶನ ಪರಿಚವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಹೀಗಾಗಿ ಈ ಜೋಡಿ ಲಾಡ್ಜ್‌ನಲ್ಲಿ ರೂಮ್ ಮಾಡಿಕೊಂಡಿತ್ತು. ಆದ್ರೆ ನಿನ್ನೆ(ಅ.10) ಬೆಳಗ್ಗೆ ಲಾಡ್ಜ್ ನಲ್ಲಿ ಇಬ್ಬರಿಗೂ ಜಗಳ ಆಗಿದ್ದು, ಈ ವೇಳೆ ರೂಮ್ ಗೆ ಮತ್ತೊಬ್ಬ ವ್ಯಕ್ತಿ ಬಂದು ಹೋಗಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ರೂಮಿನಲ್ಲಿ ಕಾವೇರಿ ಹಾಗೂ ರಮೇಶನಿಗೆ ಇಬ್ಬರಿಗೂ ಮತ್ತೆ ಗಲಾಟೆ ಆಗಿರೋ ಸಾಧ್ಯತೆಯಿದ್ದು ಈ ವೇಳೆ ರಮೇಶ ಪೆಟ್ರೋಲ್ ಸುರಿದುಕೊಂಡು ಮೇನ್ ಡೋರ್ ಲಾಕ್ ಮಾಡಿದ್ದಾನೆ. ಭಯದಲ್ಲಿ ಕಾವೇರಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಾತ್ ರೂಂಗೆ ಓಡಿ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ. ಬಳಿಕ ತನ್ನ ಸ್ಪಾ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಆದ್ರೆ, ಅಷ್ಟೊತ್ತಿಗಾಗಲೇ ಬೆಂಕಿ ಇಡೀ ರೂಂ ವ್ಯಾಪಿಸಿದೆ. ಬೆಂಕಿಯಿಂದಾಗಿ ರಮೇಶ್ ಸಾವಾಗಿದ್ರೆ. ಹೊಗೆಯಿಂದ ಉಸಿರುಗಟ್ಟಿ ಕಾವೇರಿ ಸಾವನ್ನಪ್ಪಿದ್ದಾಳೆ.
ಒಬ್ಬರ ಮೊಬಲ್ ನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ರಮೇಶ್ ಮೊಬೈಲ್ ನೀರಲ್ಲಿ ಮುಳಗಿದ್ದು,ಆನ್ ಆಗ್ತಿಲ್ಲ. ಯುವತಿ ಮೊಬೈಲ್ ಅನ್ನು ಯಲಹಂಕ ಟೌನ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈ ಇಬ್ಬರ ನಡುವೆ ಮತ್ತೋರ್ವನ ಎಂಟ್ರಿಯ ಅನುಮಾನವೂ ಇದೆ. ಲಾಡ್ಜ್ ನಲ್ಲಿ ರಮೇಶ್ ಮತ್ತು ಕಾವೇರಿ ಇದ್ದಾಗ ಮತ್ತೋರ್ವ ಯುವಕ ಬಂದು ಹೋಗಿದ್ದಾನೆ. ಹೀಗಾಗಿ ಆತನ ಪತ್ತೆಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ. ಆತ ಯಾರೆಂದು ಪೊಲೀಸರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.