ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಸೀತಾಪುರದ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟುವಾಗ ಎರಡು ಮುಖಗಳು, ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದೆ. ಮಗುವಿನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕ್ರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಾತಾಪುರ ಗ್ರಾಮದ ಕೊರಿಯನ್ ಪುರ್ವಾ ಮೂಲದ ರಮಾ ದೇವಿ (40) ಈ ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ ತಾಯಿ.
ಅವರಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಪಿಎಚ್‍ಸಿ ರೇವಾನ್‍ಗೆ ಕರೆದೊಯ್ಯಲಾಯಿತು. ಮುಂಜಾನೆ 5 ಗಂಟೆ ಸುಮಾರಿಗೆ ಮಹಿಳೆ ಈ ಅಸಾಧಾರಣ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಗ್ರಾಮಸ್ಥರು ಪವಾಡಸದೃಶ ಮಗುವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದರು. ಆದರೆ, ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಗು ಮೃತಪಟ್ಟಿದೆ. ಎರಡು ದೇಹಗಳು ಇರುವಂತೆ ಕಾಣುತ್ತಿದ್ದು, ಒಂದು ದೇಹ ಬೆಳವಣಿಗೆ ಆಗಿಲ್ಲ, ಇನ್ನೊಂದು ದೇಹ ಬೆಳವಣಿಗೆ ಆಗಿದೆ. ಇದೇ ಕಾರಣದಿಂದ ನಾಲ್ಕು ಕೈ, ನಾಲ್ಕು ಕಾಲು ಹಾಗೂ ಎರಡು ತಲೆ ಮುಖ ಇದೆ ಎಂದು ಹೇಳಲಾಗಿದೆ. ಹುಟ್ಟಿದ ಐದು ಗಂಟೆಯೊಳಗೆ ಮಗು ಮೃತಪಟ್ಟಿದ್ದು, ಕುಟುಂಬದಲ್ಲಿ ನೋವು ಆವರಿಸಿದೆ.
सीतापुर – रेवान सांडा पीएचसी में अद्भुत बालक का जन्म
➡बालक के चार पैर, चार हाथ बना चर्चा का विषय
➡बालक का समूर्ण दूसरा शरीर एक में ही जुड़ा हुआ
➡बच्चे को देखने के लिए उमड़ रही सैकड़ों की भीड़#Sitapur | #BreakingNews | #BharatSamachar pic.twitter.com/dvnjc6G8Ch— भारत समाचार | Bharat Samachar (@bstvlive) July 22, 2024