ರೈಲಿನಲ್ಲಿ ಸೀಟಿಗಾಗಿ ಮಹಿಳೆಯರ ಮಧ್ಯೆ ಜೋರು ಗಲಾಟೆ, ಕೂದಲು ಎಳೆದಾಡಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲಿನಲ್ಲಿ ದೂರ ಪ್ರಯಾಣ ಮಾಡಲಿ ಅಥವಾ ಹತ್ತಿರ ಪ್ರಯಾಣ ಮಾಡುವುದಾಗಲಿ, ಕೂರೋಕೆ ಸೀಟ್ ಮಾತ್ರ ಬೇಕೇ ಬೇಕು. ಮಕ್ಕಳನ್ನು ಕೂರಿಸಿಕೊಂಡಿದ್ದರೂ, ಸ್ವಲ್ಪವೂ ಬೇರೆಯವರಿಗೆ ಜಾಗ ಬಿಡದೇ ಸೀಟು ನಮ್ಮದು ಎನ್ನುವ ಜನರಿದ್ದಾರೆ. ಇದೇ ರೀತಿ ಒಂದೇ ಸೀಟಿಗೆ ರೈಲಿನಲ್ಲಿ ಹೆಣ್ಣುಮಕ್ಕಳ ನಡುವೆ ಮಾರಾಮಾರಿಯಾಗಿದೆ.

ಮುಂಬೈ ಸ್ಥಳೀಯ ರೈಲಿನಲ್ಲಿ ಆಂಟಿಯರ ಜಗಳ ಹೆಚ್ಚಾಗಿದ್ದು, ವಿಡಿಯೋ ವೈರಲ್ ಆಗಿದೆ. ಮುಂಬೈ ರೈಲಿನಲ್ಲಿ ಆಸನಗಳು ಭರ್ತಿಯಾಗಿದ್ದು, ಒಂದು ಸೀಟ್‌ಗೆ ಮೂವರು ಮಹಿಳೆಯರ ನಡುವೆ ವಾಗ್ವಾದ ಆರಂಭವಾಗಿದೆ. ನಂತರ ಜಗಳ ತಾರಕಕ್ಕೇರಿ ಮುಖಕ್ಕೆ ಹೊಡೆದುಕೊಂಡಿದ್ದಾರೆ.

ನಂತರ ಕೂದಲಿಗೆ ಕೈ ಹಾಕಿ, ಎಳೆದಾಡಿದ್ದಾರೆ. ಸುತ್ತಮುತ್ತಲ ಜನ ಬಿಟ್ಟುಬಿಡಿ, ಛೋಡ್ ದೋ ಆಂಟಿ ಎಂದು ಹೇಳುತ್ತಿದ್ದಾರೆ. ಎರಡು ದಿನದ ಹಿಂದೆ ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಮಂದಿ ಇದನ್ನು ಶೇರ್ ಮಾಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!