ಹಿಂದೂಗಳ ಸಂಭ್ರಮಾಚರಣೆ ವೇಳೆ ಅಲ್ಲಾಹು ಅಕ್ಬರ್ ಕೂಗಿ ಗಲಭೆ ಎಬ್ಬಿಸಿದ ಮಹಿಳೆ

ಹೊಸದಿಗಂತ ವರದಿ ಶಿವಮೊಗ್ಗ:

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಅಂಗವಾಗಿ ಸೋಮವಾರ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಹಿಂದುಪರ ಸಂಘಟನೆಗಳು ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಬೆನ್ನಲ್ಲೆ ಮುಸ್ಲಿಂ ಮಹಿಳೆಯೊಬ್ಬರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಗೊಂದಲ ಸೃಷ್ಟಿಸಿದ್ದು ಪೊಲೀಸರು ಆಕೆಯನ್ನು ವಶಕ್ಕೆ ಪಡೆದ ಘಟನೆ ನಡೆಯಿತು.

ಸ್ಕೂಟಿಯಲ್ಲಿ ಮಗುವಿನ ಜತೆ ಬಂದ ಮಹಿಳೆ ರಸ್ತೆ ಮಧ್ಯೆ ನಿಂತು ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದರು. ಬಳಿಕ ವಿಡಿಯೋ ಕಾಡುತ್ತಿದ್ದಾಗ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಮುಂದೆ ಹೋಗುವಂತೆ ಮಹಿಳೆಗೆ ಸೂಚಿಸಿದ್ದಾರೆ. ಇದರಿಂದ ಸಿಟ್ಟಾದ ಮಹಿಳೆ, ಪೊಲೀಸರ ವಿರುದ್ದ ತಿರುಗಿಬಿದ್ದು ನೀವೇನು ಮೋದಿ ಛೇಲಾಗಳ, ನನಗೆ ಏಕೆ ತೆರಳುವಂತೆ ಸೂಚಿಸುತ್ತೀಯಾ ಎಂದು ಏಕವಚನದಲ್ಲೇ ಧಮ್ಕಿ ಹಾಕಿದರು.

ಇದೇ ವೇಳೆ ಪಕ್ಕದಲ್ಲಿ ಹಿಂದು ಕಾರ್ಯಕರ್ತರು ಶ್ರೀರಾಮ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ತನ್ನನ್ನು ನೋಡಿಯೇ ಘೋಷಣೆ ಕೂಗುತ್ತಿದ್ದಾರೆಂದು ತಪ್ಪಾಗಿ ಭಾವಿಸಿದ ಮಹಿಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದರು. ಈ ವೇಳೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ತಕ್ಷಣವೇ ಪೊಲೀಸರು ಆಕೆಯನ್ನು ಜೀಪಿನಲ್ಲಿ ಕೂರಿಸಿಕೊಂಡು‌ಕೋಟೆ ಠಾಣೆಗೆ ಕರೆದೊಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!