ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಲ್ಲಿ ಸಾಕುಪ್ರಾಣಿಯನ್ನು ಇಟ್ಟುಕೊಂಡಿರುವವರು ತಮ್ಮ ಮಕ್ಕಳಂತೆಯೇ ಅದಕ್ಕೆ ಆರೈಕೆ ಮಾಡುತ್ತಾರೆ. ಮಕ್ಕಳಂತೆ ಮುದ್ದು ಮಾಡುತ್ತಾರೆ, ತಮ್ಮ ಮಕ್ಕಳಿಗೆ ಯಾರಾದ್ರೂ ತೊಂದರೆ ಕೊಟ್ಟರೆ ಹೇಗೆ ಬೈದವರಿಗೆ ನಾವು ಪಾಠ ಕಲಿಸ್ತೀವೋ, ಅವರೂ ಕೂಡ ಹಾಗೇ ಮಾಡ್ತಾರೆ.
ತಮ್ಮ ಮನೆಯ ಬೆಕ್ಕಿನ ಮೇಲಿನ ಅಂಧಪ್ರೇಮದಿಂದ ಮಹಿಳೆಯೊಬ್ಬಳು ಪಕ್ಕದ ಮನೆಯ ನಾಯಿ ಮೇಲೆ ಆಸಿಡ್ ಎರಚಿದ್ದಾಳೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ಬೆಕ್ಕನ್ನು ನಾಯಿ ಅಟ್ಟಾಡಿಸುತ್ತಿತ್ತು, ಇದು ಬೆಕ್ಕಿನ ಮಾಲಕಿ ಶಬಿಸ್ತಾಗೆ ಸಿಟ್ಟು ತರಿಸುತ್ತಿತ್ತು, ನಾಯಿಯ ಓನರ್ ಬಳಿ ತೆರಳಿ ಒಂದೆರಡು ಬಾರಿ ನಿಮ್ಮ ಮನೆಯ ನಾಯಿ ನಮ್ಮ ಬೆಕ್ಕಿಗೆ ತೊಂದರೆ ಕೊಡುತ್ತದೆ ಎಂದು ಹೇಳಿದ್ದರು. ಆದರೆ ಮನೆಯವರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಇದರಿಂದಾಗಿ ಕೋಪಗೊಂಡ ಶಬಿಸ್ತಾ ಮಲಗಿದ್ದ ನಾಯಿ ಮೇಲೆ ಆಸಿಡ್ ಎರಚಿದ್ದಾರೆ. ಪ್ರಾಣಿ ಹಿಂಸೆ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.