ಆಸ್ಟ್ರೇಲಿಯಾದಿಂದ ಹಾವೇರಿಗೆ ಬಂದು ವೋಟ್ ಮಾಡಿದ ಮಹಿಳೆ!

ಹೊಸದಿಗಂತ ವರದಿ, ಹಾವೇರಿ:

ಮತದಾನ ಮಾಡಲೆಂದು ಆಸ್ಟ್ರೇಲಿಯಾದ ಸಿಡ್ನಿಯಿಂದ ಹಾವೇರಿಗೆ ಬಂದು ಮತದಾನ ಮಾಡುವ ಮೂಲಕ ಭುವನೇಶ್ವರಿ ಕರಿಗೌಡರ ಅವರು ಮಾದರಿ ಎನಿಸಿದ್ದಾರೆ.

ಹಾವೇರಿ ನಗರದ ಲಯನ್ಸ್ ಶಾಲೆಯ 217 ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮೂಲತಃ ಶಿವಮೊಗ್ಗದವರಾದ ಇವರು ಹಾವೇರಿ ಶಹರದ ಬಸವೇಶ್ವರ ನಗರದ ವ್ಯಕ್ತಿಯನ್ನು ವಿವಾಹವಾಗಿದ್ದು ಹಾವೇರಿ ನಿವಾಸಿಯಾಗಿದ್ದಾರೆ. ಈ ಮಹಿಳೆ ತನ್ನ ಪತಿಯೊಂದಿಗೆ ಕಳೆದ ಹಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದು ಈಗ ಮತದಾನಕ್ಕಾಗಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತದಾನ ಮಾಡುವದು ಪ್ರತಿಯೊಬ್ಬರ ಜವಾಬ್ದಾರಿ, ತಪ್ಪದೇ ಎಲ್ಲರೂ ಮತದಾನ ಮಾಡಿ ಎಂದು ವಿನಂತಿ ಮಾಡಿದ್ದು ಈ ಮೂಲಕ ಮತ ಶಕ್ತಿಯ ಅರಿವು ಮೂಡಿಸಿದ್ದಾರೆ ಭುವನೇಶ್ವರಿ ಕರಿಗೌಡರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!