ದಿಗಂತ ವರದಿ ವಿಜಯಪುರ:
ಬೆಳ್ಳಂ ಬೆಳಗ್ಗೆ ಮನೆಯ ಎದುರು ಕಸ ಗುಡಿಸುವಾಗ ಮಹಿಳೆಯ ಚಿನ್ನದ ಸರವನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಗರದ ಕೀರ್ತಿ ನಗರದಲ್ಲಿ ನಡೆದಿದೆ.
ಇಲ್ಲಿನ ಲಕ್ಷ್ಮಿ ಕೆಂಗನಾಳ ಎಂಬವರ ಕೊರಳಿನಲ್ಲಿದ್ದ ಸುಮಾರು ಮೂರು ತೊಲಿ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನು ಮನೆಯ ಎದುರು ಕಸ ಗುಡಿಸುವಾಗ ಹಿಂದಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಬಂದು ಲಕ್ಷ್ಮಿ ಚಿನ್ನದ ಸರ ಕಳತನ ಮಾಡಿ ಪರಾರಿಯಾಗಿದ್ದಾರೆ.