ವಿಮಾನ ಪ್ರಯಾಣದ ವೇಳೆ ಮಹಿಳೆಯ ಮಹಾ ಎಡವಟ್ಟು! ಅಂತದ್ದು ಏನಾಯ್ತು ಅಂತೀರಾ ನೀವೇ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವಾಗ, ಸ್ವಲ್ಪ ಉದ್ವೇಗ ಮತ್ತು ಗೊಂದಲವುಂಟಾಗುವುದು ಸಹಜ. ಹೀಗಾಗಿ ಮಹಿಳೆಯೊಬ್ಬರು ತಮ್ಮ ಮೊದಲ ವಿಮಾನ ಪ್ರಯಾಣದಲ್ಲೇ ತಪ್ಪು ಮಾಡಿದ್ದು, ಈ ತಪ್ಪು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾತ್ ರೂಂ ಬಾಗಿಲು ಎಂದು ಭಾವಿಸಿ ಮಹಿಳೆ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದಾರೆ.

ವರದಿಯ ಪ್ರಕಾರ, ಏರ್ ಚೀನಾ ವಿಮಾನವು ಜುಲೈ 4 ರಂದು ಪೂರ್ವ ಚೀನಾದ ನಗರವಾದ ಕುಝೌದಿಂದ ನೈಋತ್ಯ ನಗರವಾದ ಚೆಂಗ್ಡುಗೆ ಟೇಕ್ ಆಫ್ ಆಗಬೇಕಿತ್ತು, ಆದರೆ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆಗೆದಿದ್ದಾರೆ. ಇದರಿಂದಾಗಿ ವಿಮಾನದಿಂದ ಪ್ರಯಾಣಿಕರನ್ನು ಹೊರತಂದು ವಿಮಾನ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.

ವರದಿಗಳ ಪ್ರಕಾರ, ಸಿಬ್ಬಂದಿಯ ಅನುಮತಿಯಿಲ್ಲದೆ ಇದ್ದಕ್ಕಿದ್ದಂತೆ ತುರ್ತು ನಿರ್ಗಮನವನ್ನು ತೆರೆದ ಮಹಿಳೆಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!