ಹೊಸದಿಗಂತ ವರದಿ ಮಡಿಕೇರಿ:
ಸೂಟ್ಕೇಸ್ನಲ್ಲಿ ತುಂಬಿಸಿ ಎಸೆದಿರುವ ಮೃತದೇಹವೊಂದು ಮಾಕುಟ್ಟ-ಪೆರುಂಬಾಡಿ ಮಾರ್ಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಕುಟ್ಟ ಮತ್ತು ಪೆರಂಬಾಡಿ ರಸ್ತೆಯಲ್ಲಿರುವ ಪೆರುಂಬಾಡಿ ಚೆಕ್ಪೋಸ್ಟ್ನಿಂದ ಮೂರು ಕಿ.ಮೀ.ದೂರದ ಅರಣ್ಯ ಪ್ರದೇಶದಲ್ಲಿ ಸೋಮವಾರ ಅಪರಾಹ್ನ ಈ ಮೃತದೇಹ ಕಂಡುಬಂದಿದೆ.
ಸುಮಾರು 25 ರಿಂದ 30 ವರ್ಷ ವಯಸ್ಸಿನ ಯುವತಿ ಅಥವಾ ಮಹಿಳೆಯ ಶವವನ್ನು ಯಾರೋ ಸೂಟ್ಕೇಸ್ನಲ್ಲಿ ತುಂಬಿ ಎಸೆದು ಹೋಗಿದ್ದು, ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಯಾವುದಾದರೂ 25 ರಿಂದ 30 ವರ್ಷದೊಳಗಿನ ಹುಡುಗಿ ಅಥವಾ ಮಹಿಳೆ ಕಾಣೆಯಾಗಿ ಪತ್ತೆ ಆಗದೇ ಇರುವ ಪ್ರಕರಣಗಳಿದ್ದಲ್ಲಿ ಅದರ ಮಾಹಿತಿಯನ್ನು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸುವಂತೆಯೂ ಪೊಲೀಸರು ಕೋರಿದ್ದಾರೆ.