ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ರಂಗದಲ್ಲಿ ಅಂದ ಬಹುಮುಖ್ಯ. ಸ್ವಲ್ಪ ವಯಸ್ಸಾದಂತೆ ಕಂಡರೂ ಅವರ ಸ್ಟಾರ್ಡಮ್ ಬಿದ್ದು ಹೋಗುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿ ಕನ್ನಡ ಪಡ್ಡೆ ಹುಡುಗರ ಮನ ಗೆದ್ದಿದ್ದ ಸುದೀಪ್ಗೆ ಹೆಸರು ತಂದುಕೊಟ್ಟ ʻಹುಚ್ಚʼ ಸಿನಿಮಾದ ನಾಯಕಿಯನ್ನು ಈಗ ನೋಡಿದರೆ ಶಾಕ್ ಆಗುವುದಂತೂ ಗ್ಯಾರೆಂಟಿ.
ಅರೇ ಏನಾಯ್ತು ಇವರಿಗೆ..ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಚಾಪು ಮೂಡಿದ್ದ ನಟಿಗೆ ಅಂಥದ್ದೇನಾಯ್ತು. ಹುಚ್ಚ, ಹುಡುಗಾಟ, ಚಲ್ಲಾಟ ಸಿನಿಮಾಗಳ ಮೂಲಕ ಜನರ ಮನೆಗೆದ್ದಿದ್ದ ನಟಿ, ಬೇರೆ ಭಾಷೆಗಳಲ್ಲಿಯೂ ಹಲವು ಸಿನಿಮಾ ಮಾಡಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
2014ರಿಂದ ಸಿನಿಮಾಗಳಿಂದ ದೂರ ಉಳಿದಿದ್ದ ರೇಖಾ ಇತ್ತೀಚೆಗೆ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತೆಲುಗಿನಲ್ಲಿ ಶ್ರೀದೇವಿ ಡ್ರಾಮಾ ಕಂಪನಿ ಎಂಬ ಶೋಗೆ ನಟಿ ರೇಖಾ ಬಂದಿದ್ದರು. ಪ್ರೋಮೋ ಬಿಡುಗಡೆಯಾದಾಗ ಈ ಶೋನಲ್ಲಿ ರೇಖಾ ಅವರನ್ನು ನೋಡಿ ಎಲ್ಲರೂ ಆಶ್ಚರ್ಯಕ್ಕೊಳಗಿದ್ದಂತೂ ಸುಳ್ಳಲ್ಲ.
ಬಹಳಷ್ಟು ಸಣ್ಣ ಆಗಿದ್ದಲ್ಲದೆ, ಮುಖದ ಅಂದವೂ ಸಂಪೂರ್ಣ ಬದಲಾಗಿದೆ. ಈ ಫೋಟೋ ಮತ್ತು ವೀಡಿಯೋ ನೋಡಿದ ಜನರು ಆಕೆ ನಿಜವಾಗಿಯೂ ರೇಖಾಳೇ ಎಂದು ಪ್ರಶ್ನಿಸುತ್ತಿದ್ದಾರೆ. ನಿಜವಾಗಿಯೂ ಆಕೆಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆಯಾ? ಮತ್ತೇನಾದರೂ ಸಮಸ್ಯೆನೇ ಎಂಬುದು ಗೊತ್ತಾಗಬೇಕಾದರೆ ಆ ಶೋ ಸಂಪೂರ್ಣ ಎಪಿಸೋಡ್ ಬಿಡುಗಡೆಯಾದರೆ ಮಾತ್ರ ತಿಳಿಯುತ್ತದೆ.