Wednesday, March 29, 2023

Latest Posts

SHOCKING | ಕೊಳೆತ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ, ಆರು ತಿಂಗಳ ಹಿಂದೆ ಆತ್ಮಹತ್ಯೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆಯ ಶವ ಪತ್ತೆಯಾಗಿದೆ.
ಹುಳಿಮಾವು ಬಳಿಯ ಅಕ್ಷಯನಗರದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಪೊಲೀಸರು ಮೂತ್ರವಿಸರ್ಜನೆಗೆ ಹೋದ ಸಮಯದಲ್ಲಿ ಖಾಲಿ ನಿವೇಶನದ ಪೊದೆಗಳ ನಡುವೆ ಇದ್ದ ಮರದಲ್ಲಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಚಪ್ಪಲಿ ಕೂಡ ಅಲ್ಲಿಯೇ ದೊರೆತಿದೆ.

ಆರು ತಿಂಗಳ ಹಿಂದೆ ನೇಪಾಳಿ ಮಹಿಳೆ ಪುಷ್ಪದಾಮಿ ಮಿಸ್ಸಿಂಗ್ ಎನ್ನುವ ದೂರು ಹುಳಿಮಾವು ಠಾಣೆಯಲ್ಲಿ ದಾಖಲಾಗಿದ್ದು, ಇದು ಪುಷ್ಪದಾಮಿ ಶವವೇ ಇರಬಹುದು ಎನ್ನಲಾಗಿದೆ.

ಬೆಂಗಳೂರಿನಂಥ ನಗರದಲ್ಲಿ, ಜನರು ಓಡಾಡುವ ರಸ್ತೆಯಲ್ಲಿ ಈ ರೀತಿ ಮೃತದೇಹವೊಂದು ಅಸ್ತಿಪಂಜರದ ರೂಪದಲ್ಲಿ ಕಾಣಿಸಿದ್ದು, ಆರು ತಿಂಗಳವರೆಗೆ ಇದನ್ನು ಯಾರೂ ಗಮನಿಸಿಲ್ಲ ಎನ್ನುವುದು ಪೊಲೀಸರಿಗೆ ಆಶ್ಚರ್ಯ ಹುಟ್ಟಿಸಿದೆ. ಮೂಳೆಯ ಡಿಎನ್‌ಎ ಸ್ಯಾಂಪಲ್‌ನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!