ಮಹಿಳೆಯ ಆರೋಗ್ಯದ ಜವಾಬ್ದಾರಿ ಆಕೆ ಮಾತ್ರ ಸೀಮಿತವಾಗಿಲ್ಲ: ನಟಿ ವಿದ್ಯಾ ಬಾಲನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊಲ್ಕತಾದಲ್ಲಿ ನಡೆದ 35ನೇ ಅಖಿಲ ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗದ ಕುರಿತಾದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಭಾಗವಹಿಸಿದ್ದರು.
ಈ ವೇಳೆ ಅವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಮಹಿಳೆ ತನ್ನ ದೇಹದಿಂದ ಗುರುತಿಸಿಕೊಳ್ಳುತ್ತಾಳೆ. ಆದರೆ ದೇಹದ ಆಸೆ, ಅಗತ್ಯತೆಗಳನ್ನು ತೀರ ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಮುಖ್ಯವಾಗಿ ನಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡಿರುವ ದೇಹದ ಬಗ್ಗೆ ಕಾಳಜಿಯನ್ನೂ ವಹಿಸುತ್ತಿಲ್ಲ. ಪ್ರತಿಯೊಬ್ಬ ಮಹಿಳೆಯೂ ತನ್ನ ದೇಹದ ಪ್ರತಿಯೊಂದು ಭಾಗವನ್ನೂ ಒಪ್ಪಿಕೊಂಡು ಕಾಳಜಿ ವಹಿಸಬೇಕು ಎಂದು ಹೇಳಿದರು.
ನಾವು ಮಹಿಳೆಯರ ಆರೋಗ್ಯದ ಬಗ್ಗೆ ಚರ್ಚಿಸುತ್ತಲೇ ಇರುತ್ತೇವೆ. ಮಹಿಳೆಯ ಆರೋಗ್ಯದ ಜವಾಬ್ದಾರಿ ಆಕೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯೊಬ್ಬಳು ಆರೋಗ್ಯವಂತಳಾಗಿ ಇರುವುದರ ಹಿಂದೆ ಇಡೀ ಕುಟುಂಬದ ಸಹಕಾರವೂ ಅಷ್ಟೇ ಮುಖ್ಯ ಎಂದು ಹೇಳಿದರು.
ಸಮಾಜದಲ್ಲಿ ಇಂದು ಅನೇಕ ಜಾಗೃತಿಯ ಮೂಲಕ ಮಹಿಳೆಯರ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮಂಡಿಯೂ ಮಹಿಳೆಯ ಶಿಕ್ಷಣದ ವಿಚಾರವಾಗಿ ಕ್ರಮಿಸುವುದು ಇನ್ನಷ್ಟು ಬಾಕಿಯಿದೆ ಎಂದರು.
ಇಂದು ಮಹಿಳೆಯರು ಆರೋಗ್ಯ ಸಮಸ್ಯೆ ಎಂದು ಸ್ತ್ರೀರೋಗ ತಜ್ಞರ ಬಳಿಗೆ ಹೋಗುತ್ತಾರೆ. ಈ ವೇಳೆ ಅವರ ಕುಟುಂಬ ಸದಸ್ಯರು ಕೂಡಾ ತೆರಳಬೇಕು. ಆಗ ಮಾತ್ರ ಮನೆಯ ಮಹಿಳೆಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಜನರು ಇನ್ನಷ್ಟು ಮುಂದವರಿದು, ಮಹಿಳೆಯರ ಬಗೆಗಿನ ವರ್ತನೆಗಳು ಬದಲಾಗುತ್ತವೆ ಎಂದು ವಿದ್ಯಾ ಬಾಲನ್ ಹೇಳಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!