ಚುನಾವಣೆ ನಡೆದು ಒಂದು ವರ್ಷ ಬಳಿಕ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿತು ಗೆಲುವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  

ಒಂದು ವರ್ಷ ಹಿಂದೆ ಗುಜರಾತ್‌ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಎಎಮ್‌ಸಿ)ಗೆ ಚುನಾವಣೆ ನಡೆದಿತ್ತು. ಈ ವೇಳೆ ವಾರ್ಡ್ ಸಂಖ್ಯೆ 14 ರಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ ಇದರಿಂದ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಮರು ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದರು.
ಇದೀಗ ಒಂದು ವರ್ಷದ ನಂತರ ಮತಗಳ ಮರು ಎಣಿಕೆ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಗಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಶನಿವಾರ ಘೋಷಿಸಲಾಗಿದೆ.
ಮತಗಳ ಮರು ಎಣಿಕೆ ಕೋರಿ ಕಾಂಗ್ರೆಸ್ ಅಭ್ಯರ್ಥಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮತಗಳ ಮರು ಎಣಿಕೆಗೆ ಆದೇಶಿಸಿತ್ತು.ಅದರಂತೆ ಚುನಾವಣಾ ಆಯೋಗ ಮತಗಳ ಮರು ಎಣಿಕೆ ಮಾಡಿದ್ದು, ಮತ್ತೆ ಬಿಜೆಪಿ ಅಭ್ಯರ್ಥಿ ಗೀತಾಬೆನ್ ಚಾವ್ಡಾ ಗೆಲುವು ಸಾಧಿಸಿದ್ದಾರೆ.
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಗೆ ಜನವರಿ 2021 ರಲ್ಲಿ ಚುನಾವಣೆ ನಡೆದಿತ್ತು.ಮತಗಳ ಮರು ಎಣಿಕೆಯಲ್ಲೂ ಕುಬೇರನಗರದ ವಾರ್ಡ್ ಸಂಖ್ಯೆ 14 ರ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಮೊಹ್ನಾನಿ ಅವರು ಬಿಜೆಪಿಯ ಗೀತಾಬೆನ್ ಚಾವ್ಡಾ ವಿರುದ್ಧ ಸೋಲು ಅನುಭವಿಸಿದ್ದಾರೆ.
ಗೀತಾಬೆನ್ ಚಾವ್ಡಾ ಅವರು 17,656 ಮತಗಳನ್ನು ಗಳಿಸಿದರೆ, ಮೊಹ್ನಾನಿ 16,992 ಮತಗಳನ್ನು ಪಡೆದಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!