ನೆನಪಿನ ಸಾಗರದಲ್ಲಿ ಒಂದು ವರ್ಷ: ಭಾವನಾತ್ಮಕ ಟ್ವೀಟ್ ಮಾಡಿದ ಅಶ್ವಿನಿ ಪುನೀತ್​ ರಾಜ್​ ಕುಮಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕನ್ನಡದ ಯುವರತ್ನ ಪುನೀತ್​ ರಾಜ್​ ಕುಮಾರ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಎಲ್ಲೆಡೆ ಪುನೀತ್​ ರಾಜ್​ ಕುಮಾರ್​ ಅವರ ಪುಣ್ಯ ಸ್ಮರಣೆ ಮಾಡುತ್ತಿದೆ. ಅಪ್ಪು ಅವರ ಸಮಾಧಿಗೆ ಸಹಸ್ರಾರು ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ.

ಪುನೀತ್​ ಅವರ ಪತ್ನಿ ಅಶ್ವಿನಿ ಅವರು​ ಅಪ್ಪು ಅವರನ್ನು ಜೀವಂತವಾಗಿರಿಸಿರುವ ಅಭಿಮಾನಿಗಳಿಗೆ ನಮನ ಸಲ್ಲಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ‘ನೆನಪಿನ ಸಾಗರದಲ್ಲಿ ಒಂದು ವರ್ಷ’ ಎಂಬ ಪೋಸ್ಟ್​ ಹಂಚಿಕೊಂಡಿದ್ದು, ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬಗಳು, ಅಭಿಮಾನಿಗಳು, ಅವರ ಸ್ನೇಹಿತರು ನನ್ನ ಬೆಂಬಲಕ್ಕೆ ನಿಂತಿದ್ದೀರಿ. ಅಪ್ಪು ಅವರ ಮೇಲಿರುವ ಪ್ರೀತಿ ಹಾಗೂ ಗೌರವದಿಂದ ಅವರನ್ನು ಸದಾ ಜೀವಂತವಾಗಿರಿಸಿದ್ದಕ್ಕಾಗಿ ನಮನಗಳು’ ಎಂದು ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!