COVID UPDATE | ಉನ್ನಾವೋದ ಯುವಕನಿಗೆ ಕೋವಿಡ್ ಪಾಸಿಟಿವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಚೀನಾದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿದ್ದು, ಇದೀಗ ಉತ್ತರಪ್ರದೇಶದ ಉನ್ನಾವೋದ ಯುವಕನೊಬ್ಬನಿಗೆ ಕೊರೋನಾ ಸೋಂಕು ಕಾಣಿಸಿದೆ.

ದುಬೈಗೆ ತೆರಳುತ್ತಿದ್ದ ಯುವಕ ತಾನೇ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಬಂದಿದೆ. ಇದೀಗ ಯುವಕನ ಮನೆಗೆ ಜಿಲ್ಲಾ ಸಬ್‌ಮ್ಯಾಜಿಸ್ಟ್ರೇಟ್ ಅಂಕಿತ್ ಶುಕ್ಲಾ ಅವರು ಆರೋಗ್ಯ ಇಲಾಖೆ ತಂಡದ ಜತೆ ಭೇಟಿ ನೀಡಿದ್ದಾರೆ. ಯುವಕನ ಮನೆಯವರು ಸೇರಿ 20 ಮಂದಿಯ ಸ್ಯಾಂಪಲ್ ಪಡೆಯಲಾಗಿದೆ.

ಯುವಕನನ್ನು ಐಸೋಲೇಟ್ ಮಾಡಲಾಗಿದ್ದು, ಆತನ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಇದು ಎರಡನೇ ಪ್ರಕರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!