October 12, 2026
Monday, October 12, 2026
spot_img

ಮದುವೆಯಾಗಲು ನಿರಾಕರಿಸಿದ ಯುವತಿಗೆ ಹೆಚ್‌ಐವಿ ಇಂಜೆಕ್ಷನ್ ಕೊಟ್ಟ ಯುವಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬನ್ನು ಯುವತಿಗೆ ಹೆಚ್‌ಐವಿ ಪಾಸಿಟಿವ್ ಇಂಜೆಕ್ಷನ್ ನೀಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಇಲ್ಲಿನ ಮೆಡ್ಚಲ್ ಪ್ರದೇಶದ ನಿವಾಸಿಯಾಗಿರುವ ಮನೋಹರ್ ಎಂಬ ಯುವಕನ ಜೊತೆಗೆ ಯುವತಿಯ ಮದುವೆ ನಿಶ್ಚಯಿಸಲಾಗಿತ್ತು . ಆದರೆ ಈ ವೇಳೆ ಆತನಿಗೆ ಹೆಚ್‌ಐವಿ ಪಾಸಿಟಿವ್ ಇರುವುದನ್ನು ತಿಳಿದು, ಮದುವೆಯಾಗಲು ಯುವತಿ ಒಪ್ಪಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಯುವಕ ಅನೇಕ ಬರಿ ಯುವತಿಗೆ ಮದುವೆಯಾಗಲು ಒತ್ತಾಯಿಸಿದ್ದನು. ಆದರೆ ಆಕೆ ಪ್ರತಿ ಬಾರಿಯೂ ನಿರಾಕರಿಸಿದ ಹಿನ್ನೆಲೆ ಬಲವಂತವಾಗಿ ಹೆಚ್‌ಐವಿ ಪಾಸಿಟಿವ್ ಇಂಜೆಕ್ಷನ್ ನೀಡಿದ್ದಾನೆ.

ಇದರಿಂದ ಆಕೆಗೆ ತೀವ್ರ ಜ್ವರ ಶುರುವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮನೆಯವರಿಗೆ ಮಾಹಿತಿ ತಿಳಿಸಿದ್ದು, .ಯುವತಿ ದೂರಿನ ಆಧಾರದ ಮೇಲೆ ಆರೋಪಿ ಮನೋಹರ್‌ನನ್ನ ಪೊಲೀಸರು ಬಂಧಿಸಿದ್ದಾರೆ.

Must Read