ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಟರ್ ನ್ಯಾಷನಲ್ ಡೇ ಆಫ್ ಡೆಮಾಕ್ರೆಟಿಕ್ ಕಾರ್ಯಕ್ರಮದಲ್ಲಿ ಯುವಕನೋರ್ವ ಆತಂಕ ಸೃಷ್ಟಿಸಿದ್ದಾನೆ. ಏಕಾಏಕಿ ಯುವಕನೊಬ್ಬ ಸಿಎಂ ಸಿದ್ದರಾಮಯ್ಯ ಕುಳಿತಿದ್ದ ವೇದಿಕೆಗೆ ನುಗ್ಗಿ ಆತಂಕ ಮೂಡಿಸಿದ್ದಾನೆ.
ವಿಧಾನಸೌಧದ ಮುಂಭಾಗದ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲು ಹೊದ್ದುಕೊಂಡು ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ಬರಲು ಯುವಕನೊಬ್ಬ ವೇದಿಕೆಯ ಮುಂಭಾಗಕ್ಕೆ ಜಿಗಿದಿದ್ದಾನೆ. ಈ ವೇಳೆ ವೇದಿಕೆ ಮೇಲಿದ್ದ ಹಲವು ಗಣ್ಯರು ತಬ್ಬಿಬ್ಬಾಗಿದ್ದಾರೆ.
ಕೂಡಲೇ ಸಿಎಂ ಅಂಗರಕ್ಷಕರು ಯುವಕನನ್ನು ತಡೆದರು. ಬಂಧನದ ನಡುವೆಯೂ ಯುವಕ ಸಿಎಂ ಮೇಲೆ ಶಾಲು ಎಸೆದಿದ್ದಾನೆ. ಯುವಕನ ನುಗ್ಗುವಿಕೆಯ ವೇಗಕ್ಕೆ ಗಣ್ಯರು ತಬ್ಬಿಬ್ಬಾದರು.