ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಹಳಿ ಮೇಲೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮೆಟ್ರೋ ಬರುತ್ತಿದ್ದಂತೆ, ಪ್ಲಾಟ್‌ಫಾರ್ಮ್‌ಗೆ ಹಾರಿದ ಯುವಕ ಎರಡು ಹಳಿಗಳ ಮಧ್ಯೆ ಮಲಗಿದ್ದಾನೆ. ರೈಲು ಚಾಲಕ ತಕ್ಷಣವೇ ಮೆಟ್ರೋವನ್ನು ನಿಲ್ಲಿಸಿದ್ದರಿಂದ ಯುವಕ ಬಚಾವ್ ಆಗಿದ್ದಾನೆ.
ಬಿಎಂಆರ್‌ಸಿಎಲ್ ಮೆಟ್ರೋ ಸೇವೆ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.