ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಟಿ.ಸರಸೀಪುರ ತಾಲೂಕಿನ ತಲಕಾಡಿನಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನದಿಯಲ್ಲಿ ಈಜಲು ಹೋಗಿದ್ದ ಯುವಕ ದೀಕ್ಷಿತ್(16) ಈಜು ಬಾರದೇ ಮುಳುಗಿ ಮೃತಪಟ್ಟಿದ್ದಾನೆ. ವೈಕುಂಠೋತ್ಸವದ ಹಿನ್ನೆಲೆ ಗೆಳೆಯರ ಜತೆ ಮಾಧವ ಮಂತ್ರಿ ಅಣೆಕಟ್ಟೆ ಬಳಿ ಯುವಕ ತೆರಳಿದ್ದು, ಈಜು ಬಾರದೇ ಮುಳುಗಿ ಮೃತಪಟ್ಟಿದ್ದಾನೆ.
ಈಜು ಬಾರದೇ ಇದ್ದರೂ ಗೆಳೆಯರ ಜತೆ ನದಿಗೆ ಇಳಿದು, ದಡದಲ್ಲಿರದೆ, ಕಾಲು ಸಿಗದೇ ಹೋದರೂ ಮುಂದೆ ಮುಂದೆ ಹೋಗಿದ್ದಾನೆ. ತಲಕಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರಂತರ ಕಾರ್ಯಾಚರಣೆ ನಂತರ ತಡರಾತ್ರಿ ದೀಕ್ಷಿತ್ ಮೃತದೇಹ ಪತ್ತೆಯಾಗಿದೆ.